udayavahiniಉದಯವಾಹಿನಿ, ಕುಶಾಲನಗರ: ಪತ್ರಕರ್ತರ ಕರ್ತವ್ಯಕ್ಕೆ ನಿರ್ಬಂಧ ಸಲ್ಲದು ಆದರೆ ಸಮಾಜದ ಮುಖ್ಯ ವಾಹಿನಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರು ಕೂಡ ಇಂದು ಬೆದರಿಕೆಗಳನ್ನು ಎದುರಿಸುವಂಥಾಗಿದ್ದು ಸರ್ಕಾರ ಪತ್ರಕರ್ತರಿಗೂ ಜೀವನ ಭದ್ರತೆ ಒದಗಿಸಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ರವರು ಇಂದಿಲ್ಲಿ ಹೇಳಿದರು.
ನಗರದ ಎಪಿಸಿಎಂಎಸ್‌ಸಿ ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಕುಶಾಲನಗರ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದಿಕ್ಸೂಚಿ ಬಾಷಣ ಮಾಡಿದ ಸಂಘದ ಗೌರವ ಸಲಹೆಗಾರ ಬಿಜಿ ಅನಂತಶಯನ ಮಾತನಾಡಿ ಕೆಲವರಿಂದ ಸಾಮಾಜಿಕ ಜಾಲತಾಣಗಳ ದುರುಪಯೋಗ ಆಗುತ್ತಿದ್ದು ಇದರಿಂದ ಅನಾಹುತಗಳು ಸೃಷ್ಟಿಯಾಗುತ್ತಿರುವುದು ಕಂಡುಬಂದಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಕೊಡಗು ಜಿಲ್ಲಾಡಳಿತ ಕಾನೂನು ಸಲಹೆಗಾರ ಈ ಲೋಕೇಶ್ ಕುಮಾರ್ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಜ್ಞೇಶ್ ನೂತನ ಕಾಡು ನೇತೃತ್ವದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಂಘದ ಸದಸ್ಯರ ಮಕ್ಕಳಿಗೆ ಮುಖ್ಯಸ್ಥ ಮುರಳಿಧರ್ ಮತ್ತು ಗಣ್ಯರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಮುರುಳಿಧರ್. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್. ಮಧು ನಾಗಪ್ಪ ಉದ್ಯಮಿ ಎನ್ರಿಕ್ ಮಾರ್ಟಿನ್ ಹಾಜರಿದ್ದರು

Leave a Reply

Your email address will not be published. Required fields are marked *

error: Content is protected !!