ಉದಯವಾಹಿನಿ, ಬೆಂಗಳೂರು: ಒಮೆಗಾ ಕಂಪನಿಯಿಂದ ಚಾಲಕರಿಗೆ ತರಬೇತಿ ಕಾರ್ಯಾಗಾರ ಮತ್ತು ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರoಭ ಸುರಕ್ಷತಾ ದೃಷ್ಟಿಯಿಂದ ವಾಹನ ಚಾಲನೆ ಸಮಯದಲ್ಲಿ ಸಂಚಾರಿ ನಿಯಮ ಪಾಲಿಸುವುದು ಮತ್ತು
ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಎಚ್ಚರವಹಿಸುವುದರ ಬಗ್ಗೆ ಸವಿವರವಾದ ಬೆಂಗಳೂರಿನ ಹಲಸೂರಿನಲ್ಲಿ ನಡೆಸಲಾಯಿತು.
ಕಾಪೋರೇಟ್ ಸಂಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕoಪನಿಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನುರಿತ, ವೃತ್ತಿಪರ ತರಬೇತುದಾರರಿoದ ಕ್ಯಾಬ್ ಚಾಲಕರಿಗೆ ತರಬೇತಿ ನೀಡಿ ಚಾಲಕರ ಜೊತೆ ಸಂವಾದ, ಚರ್ಚೆಯನ್ನು ನಡೆಸಲಾಯಿತು. ಕ್ಯಾಬ್ ಚಾಲಕರಿಗೆ ಶಿಸ್ತು, ಸಂಯಮ, ಸ್ವಚ್ಛತೆ, ಸಮಯಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸಲಾಯಿತು.
ವೃತ್ತಿಪರ ಚಾಲಕರ ಕರ್ತವ್ಯಗಳು, ಜವಾಬ್ದಾರಿಗಳು, ನಡುವಳಿಕೆ, ಶುಚಿತ್ವ, ಶುಭ್ರತೆ, ವಿನಮ್ರತೆ, ಸುರಕ್ಷತಾ ಚಾಲನೆ, ರಸ್ತೆ ನಿಯಮ ಪಾಲನೆ, ವೇಗಮಿತಿ, ಮುಂಜಾಗ್ರತೆ ಕ್ರಮಗಳು, ವಾಹನದ ನಿರ್ವಹಣೆ, ವಾಹನದ ದಾಖಲೆಗಳು ಇನ್ನಿತರ ಹತ್ತು ಹಲವು ವಿಚಾರಗಳನ್ನೊಳಗೊಂಡ ತರಬೇತಿ ಕಾರ್ಯಕ್ರಮಕ್ಕೆ ಚಾಲಕರಿಂದ ಉತ್ತಮ ಸ್ಪಂದನೆ ದೊರೆಯಿತು.
ತರಬೇತಿ ಕಾರ್ಯಾಗಾರದ ನoತರ ೨೦೨೩ ಸಾಲಿನ ಎಸ್. ಎಸ್. ಎಲ್. ಸಿ ಮತ್ತು ಪಿ. ಯು. ಸಿ. ಪರೀಕ್ಷೆಯಲ್ಲಿ ಶೇ.೮೦ ಕ್ಕೂ ಹೆಚ್ಚಿನ ಅಂಕ ಪಡೆದ ಆಯ್ದ ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ವಿದ್ಯಾರ್ಥಿವೇತನ ಪಡೆದವರಲ್ಲಿ ಪಿಯುಸಿ, ಡಿಗ್ರಿ, ಇoಜಿನಿಯರಿoಗ್, ಮೆಡಿಕಲ್(ಎಮ್.ಬಿ.ಬಿ.ಎಸ್ ) ಓದುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಕಾರ್ಪೋರೇಟ್ ಸಂಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕoಪನಿಯು ಉತ್ತಮ ಅoಕ ಪಡೆದ ಚಾಲಕರ ಮಕ್ಕಳನ್ನು ಗುರುತಿಸುವ, ಉತ್ತೇಜಿಸುವ ಆಯ್ದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ಸದುದ್ದೇಶದಿoದ ಸ್ವತಂತ್ರವಾಗಿ ಸ್ವಯಂಪ್ರೇರಿತವಾಗಿ ಈ ಯೋಜನೆಯನ್ನು ಹಮ್ಮಿಕೊಂಡಿದೆ.
