ಉದಯವಾಹಿನಿ, ಆನೇಕಲ್ : ಜಾಖಂಡ್ ನಲ್ಲಿ ಇತ್ತೀಚೆಗೆ ನಡೆದ ರಾಷ್ಠೀಯ ಮಟ್ಟದ ಅಂಡರ್ ಪೋರ್ ಟೀನ್ ಕಬ್ಬಡ್ಡಿ ಪಂದ್ಯಾಳಿಯಲ್ಲಿ ಆನೇಕಲ್ ತಾಲ್ಲೂಕಿನ ಬಳಗಾರನಹಳ್ಳಿ ಗ್ರಾಮದಲ್ಲಿರುವ ವಿ-ಬ್ಲೂಮ್ಸ್ ಇಂಟರ್ ನ್ಯಾಷ್‌ನಲ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಕರ್ನಾಟಕದ ರಾಜ್ಯದ ತಂಡದೊಂದಿಗೆ ಆಟ ವಾಡಿ ದ್ವಿತೀಯ ಪಡೆದುಕೊಂಡಿದ್ದಾರೆ.
ರಾಜ್ಯಕ್ಕೆ ಹಾಗೂ ಆನೇಕಲ್ ತಾಲ್ಲೂಕಿಗೆ ಹೆಸರು ತಂದಿದ್ದು ಇಂದು ತನ್ಮಯ್ ಮತ್ತು ಹರಿ ವಿಲಾಸ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ವಿ-ಬ್ಲೂಮ್ಸ್ ಇಂಟರ್ ನ್ಯಾಷ್‌ನಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಿವಾಸ್ ಸೇರಿದಂತೆ ಶಾಲೆಯ ಆಡಳಿತ ಮಂಡಳಿಯವರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಗೋಪಾಲ್. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶಿಲ್ಪ, ಶ್ರೀಮತಿ ತಾರಾದೇವಿ, ಅರುಣದೇವಿ, ರೋಹಿಣಿ. ಕಬ್ಬಡ್ಡಿ ತರಬೇತುದಾರರಾದ ರಘು, ರವೀಂದ್ರ ಮತ್ತು ಶಿಕ್ಷಕರು. ವಿದ್ಯಾರ್ಥಿಗಳು ಬಾಗವಹಿಸಿದ್ದರು.
