
ಉದಯವಾಹಿನಿ ಹೊಸಕೋಟೆ : ಕೃಷಿಕರು ಹೈನುಗಾರಿಕೆಯನ್ನು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗುತ್ತದೆ. ಆರ್ಥಿಕ ಸಂಕಷ್ಟದಿAದ ಪಾರಾಗಲು ಹೈನುಗಾರಿಕೆ ರೈತರಿಗೆ ವರದಾನವಾಗಿದೆ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ. ರಾಜಣ್ಣ ತಿಳಿಸಿದರು.ತಾಲೂಕಿನ ನೆಲವಾಗಿಲು ಗ್ರಾಪಂ. ವ್ಯಾಪ್ತಿಯ ಆರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶನಿವಾರ ನಡೆದ ೨೦೨೧-೨೨ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷಿಕರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸಬೇಕು. ೨೦೨೧-೨೨ನೇ ಸಾಲಿನಲ್ಲಿ ಸಂಘಕ್ಕೆ ವ್ಯಾಪಾರ ಲಾಭ ೯.೯೯ ಲಕ್ಷ ರೂಗಳಲ್ಲಿ ನಿವ್ವಳ ಲಾಭ ೫.೫೩ ಲಕ್ಷ ರೂ ಬಂದಿದ್ದು, ರೈತರಿಗೆ ಶೇ. ೨.೧ ರಷ್ಟು ಬೋನಸ್ ವಿತರಿಸಲಾಗುವುದು ಎಂದರು.ಹೊಸಕೋಟೆ ಶಿಬಿರದ ಮಾರ್ಗ ವಿಸ್ತಾರಣಾಧಿಕಾರಿ ಟಿ.ಎಂ. ಆನಂದ್, ಮಾತನಾಡಿ, ಕೃಷಿಕರು ಹೈನುಗಾರಿಕೆಯನ್ನು ಹೆಚ್ಚು ತೊಡಗಿಸಿಕೊಳ್ಳುವುದರಿಂದ ಹೈನೋದ್ಯಮ ಬೆಳವಣಿಗೆಯನ್ನು ಕಾಣಲು ಸಾಧ್ಯವಾಗುತ್ತದೆ. ಹಾಲು ಉತ್ಪಾದಕರಿಗೆ ಸರಕಾರ ಮತ್ತು ಬಮೂಲ್ ವತಿಯಿಂದ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಿ ಆರ್ಥಿಕ ಮಟ್ಟ ಉತ್ತಮ ಪಡಿಸುವ ದಿಸೆಯತ್ತ ಸಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ೨೦೨೧-೨೨ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ೩ ಸದಸ್ಯರಿಗೆ ಹಾಲಿನ ಕ್ಯಾನ್ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ. ಸದಸ್ಯ ಬಸವರಾಜ್, ಎಂಪಿಸಿಎಸ್ ಉಪಾಧ್ಯಕ್ಷೆ ಸುವರ್ಣ, ನಿರ್ದೆಶಕರುಗಳಾದ ನರಸಿಂಹರೆಡ್ಡಿ, ದೇವರಾಜ್, ಕೃಷ್ಣಪ್ಪ, ಎಸ್. ರಮೇಶ್, ಪಿಳ್ಳೇಗೌಡ, ಹೇಮಾವತಮ್ಮ, ಚಂದ್ರಿಕಾ, ಮಂಜುಳ, ಮುಖ್ಯ ಕಾರ್ಯನಿರ್ವಹಕ ಎ.ಎಂ. ಚಂದ್ರಪ್ಪ, ಹಾಲು ಪರೀಕ್ಷಕ ಎಂ. ನಾಗರಾಜ್, ಸಹಾಯಕ ರಾಜಣ್ಣ ಹಾಗೂ ರೈತರು ಹಾಜರಿದ್ದರು.