
ಉದಯವಾಹಿನಿ ಪೀಣ್ಯ ದಾಸರಹಳ್ಳಿ: ರಾಜ್ಯದಲ್ಲಿ ಒಂದು ಕಡೆ ಮಳೆ ಅವಾಂತರ ಇನ್ನೋದು ಕಡೆ ಬಿಜೆಪಿ ದುರಾಡಳಿತ ಅದರಿಂದ ಬಡವರ ಬದುಕು ಮೂರಾಬಟ್ಟೆ ರಾಜ್ಯದ ಅಭಿವೃದ್ಧಿ ಅಧೋಗತಿ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕೆಪಿಸಿಸಿ ಸದಸ್ಯ ಪಿ ಎನ್ ಕೃಷ್ಣಮೂರ್ತಿ ವ್ಯಂಗ್ಯವಾಡಿದರು.ಒಬ್ಬ ದೇಶದ ಪ್ರಧಾನಿ ಮೊಮ್ಮಗ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶದ ಬಡವರಿಗಾಗಿ ಭಾರತ ಏಕತೆಕ್ಕಾಗಿ ಭಾರತ ಜೋಡೋ ಯಾತ್ರೆ ಕಾಲು ನಡಿಗೆ ಯಾತ್ರೆ ಕೈಗೊಂಡಿದ್ದು.
ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಪೇಟ್ರೋಲ್ ಡಿಸೇಲ್ ಗ್ಯಾಸ್ ಸಿಲಿಂಡರ್ ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗುತ್ತಲೆಯಿವೆ ಎರಡು ವರ್ಷ ಗಳಿಂದ ಕೊರೋನ ಮಹಾಮಾರಿ ಸಮಯದಲ್ಲಿ ಔಷಧಿ ಉಪಕರಣಗಳದಲ್ಲಿ ಕಮಿಸೆನ್ ದಂದೆ ಮಾಡಿದ ಸರ್ಕಾರ ಬಿಜೆಪಿ ಸರ್ಕಾರ ಬಡವರ ಬಗ್ಗೆ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ಈ ಸರ್ಕಾರ ಯಾವಾಗ ತೊಗಲುತದೆ ಎಂದು ಜನರು ಹಿಡಿ ಶಾಪ್ ಹಾಕುತ್ತಿದ್ದಾರೆ ಎಂದು ಭಾರತ ಜೋಡೋ ಯಾತ್ರೆ ಸಭೆ ನಂತರ ತಮ್ಮ ಕಚೇರಿ ಆವರಣದಲ್ಲಿ ಮಾಧ್ಯಮದವರ ಜೊತೆ ದಾರಸಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾವಿ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಪಿ ಎನ್ ಕೃಷ್ಣಮೂರ್ತಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಹರಿಹಾಯ್ದಿರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಯುವ ಮುಖಂಡರು ಮಹಿಳೆಯರು ಕಾರ್ಯಕರ್ತರು ವಾರ್ಡ್ ಮತ್ತು ಬ್ಲಾಕ್ ಅಧ್ಯಕ್ಷರು ಮುಂತಾದವರು ಇದ್ದರು.
