ಉದಯವಾಹಿನಿ, ಕೆ.ಆರ್. ಪುರ: ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ೫೭ ನೇ ಹುಟ್ಟುಹಬ್ಬದ ಪ್ರಯುಕ್ತ ಹೂಡಿ ಸ್ಪೋರ್ಟ್ಸ್ ಕ್ಲಬ್‌ನ ಆವರಣದಲ್ಲಿ ನಡೆದ ದಕ್ಷಿಣ ವಲಯ ಪುರುಷರ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯದ ಪುರುಷರ ವಿಭಾಗದಲ್ಲಿ ನೈರುತ್ಯ ರೈಲ್ವೇಸ್ ಹುಬ್ಬಳ್ಳಿ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಕೇರಳ ರಾಜ್ಯ ಪೊಲೀಸ್ ತಂಡ ಪ್ರಥಮ ಸ್ಥಾನ ಪಡೆದರು.
೪ ದಿನಗಳ ಕಾಲ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿ, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯದ ತಂಡಗಳ ಆಟಗಾರರು ಭಾಗವಹಿಸಿದ್ದರು.
ಪುರುಷರ ವಿಭಾಗ ಫೈನಲ್ಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ನೈರುತ್ಯ ರೈಲ್ವೇಸ್ ಹುಬ್ಬಳ್ಳಿ ಪಡೆದರೆ. ದ್ವಿತೀಯ ಸ್ಥಾನವನ್ನು ಕರ್ನಾಟಕ ತಂಡ ತೃಪ್ತಿ ಪಟ್ಟಿತು. ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೇರಳ ರಾಜ್ಯ ಪೊಲೀಸ್ ತಂಡ, ದ್ವಿತೀಯ ಸ್ಥಾನವನ್ನು ಸಿಕಂದರಾಬಾದ್ ನ ದಕ್ಷಿಣ-ಮಧ್ಯ ರೈಲ್ವೇಸ್ ತಂಡ ಪಡೆದಿದೆ ಎಂದು ಆಯೋಜಕ ಹೂಡಿ ಹೆಚ್.ಎಸ್.ಪಿಳ್ಳಪ್ಪ ತಿಳಿಸಿದರು. ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಪಂದ್ಯಾವಳಿಗಳ ಆಯೋಜಕ ಹೂಡಿ ಹೆಚ್.ಎಸ್. ಪಿಳ್ಳಪ್ಪ, ಜಿಪಂ ಮಾಜಿ ಸದಸ್ಯ ಗಣೇಶ್, ಬಿದರಹಳ್ಳಿ ಪಂಚಾಯತಿ ಮಾಜಿ ಅಧ್ಯಕ್ಷ ರಾಜೇಶ್,ಸಿಲಿಕಾನ್ ಸಿಟಿ ಕಾಲೇಜಿನ ಅಧ್ಯಕ್ಷ ಡಾ.ಚಂದ್ರಶೇಖರ,ಮುಖಂಡ
ನಾರಾಯಣಸ್ವಾಮಿ, ವೀರಭಹದ್ದೂರ್, ಸೋಮಶೇಖರ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!