ಉದಯವಾಹಿನಿ, ಚಿಕ್ಕಮಗಳೂರು: ನಗರದಲ್ಲಿ ಡೆಂಘೀ ಪ್ರಕರಣ ಪತ್ತೆಯಾಗಿದ್ದು, ವಿದ್ಯಾರ್ಥಿನಿಯೊಬ್ಬರು ಡೆಂಘೀಯಿಂದ ಮೃತಪಟ್ಟಿದ್ದಾರೆ. ಮಹಮ್ಮದ್ ಖಾನ್ ಗಲ್ಲಿ ನಿವಾಸಿ ಸಹರಾ ಬಾನು (18) ಡೆಂಘೀಯಿಂದ ಮೃತಪಟ್ಟ ವಿದ್ಯಾರ್ಥಿನಿ. ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ತಿಂಗಳಿನಿಂದ ಜ್ವರದಿಂದ ಬಳಲುತ್ತಿದ್ದು, ನಿನ್ನೆ ಸಂಜೆ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಯುಜಿಡಿ ಪೈಪ್ ಬದಲಾವಣೆ ಮಾಡಲು ರಸ್ತೆ ಅಗೆದು ತಿಂಗಳುಗಟ್ಟಲೆಯಾದರೂ ರಸ್ತೆ ದುರಸ್ತಿ ಮಾಡದೆ ಇದ್ದುದರಿಂದ ಚರಂಡಿಯಲ್ಲಿ ಮಣ್ಣು, ಕಸ, ಕಡ್ಡಿ, ಕೊಳಚೆ ನೀರು ತುಂಬಿ ನಾರುತ್ತಿತ್ತು. ಈ ಬಗ್ಗೆ ಸ್ಥಳೀಯರು ನಗರಸಭೆ ಗಮನಕ್ಕೂ ತಂದಿದ್ದರು. ಇಂದಿಗೂ ಸಹ ಈ ರಸ್ತೆ ಸಂಪೂರ್ಣವಾಗಿ ದುರಸ್ತಿಯಾಗಿಲ್ಲ. ಕೆಲಸ ವಹಿಸಿಕೊಂಡ ಕಂಟ್ರಾಕ್ಟರ್ ದೂರು ನೀಡಿದಾಗ ಬೇಕಾಬಿಟ್ಟಿಯಾಗಿ ಬಂದು ಅರ್ಧಂಬರ್ಧ ಕೆಲಸ ನಿರ್ವಹಿಸುತ್ತಾರೆ.
ಇಲ್ಲಿನ ನಗರಸಭಾ ಸದಸ್ಯರು ಎಷ್ಟು ಬಾರಿ ಹೇಳಿದರೂ ನಿವಾಸಿಗಳು ಕಸವನ್ನು ಚರಂಡಿಗೆ ತಂದು ಸುರಿಯುತ್ತಾರೆ. ನಗರಸಭೆ ಕಟ್ಟುನಿಟ್ಟಿದ ಕ್ರಮ ಕೈಗೊಳ್ಳಬೇಕಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದು ಸಾಂತ್ವನ ಹೇಳಿದರು.

Leave a Reply

Your email address will not be published. Required fields are marked *

error: Content is protected !!