ಉದಯವಾಹಿನಿ, ಹಡಗಲಿ: ಜಿಲ್ಲೆಯ ಹೂವಿನಹಡಗಲಿ ಪಟ್ಟಣ ಸೇರಿದಂತೆ ತಾಲೂಕಿನ ಹಿರೇಮಲ್ಲನಕೇರಿ, ಕಾಲ್ವಿ, ಸೋವೇನಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಗುರುವಾರ ಸಂವಿಧಾನ ಜಾಗೃತಿ ಜಾಥಾ ನಡೆಸುವ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ಮೊದಲಿಗೆ ಹೂವಿನಹಡಗಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಶ್ರೀಶಿವ ಶಾಂತವೀರ ಸ್ವಾಮೀಜಿ ಅವರು ಜಾಥಾಕ್ಕೆ ಚಾಲನೆ ನೀಡಿದರು. ಶಾಸ್ತ್ರಿ ಸರ್ಕಲ್‍ನಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಬಂಗಾರಪ್ಪ ನಗರದವರೆಗೆ ಜಾಥಾ ನಡೆಯಿತು. ಜಾಥಾದಲ್ಲಿ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಎಲ್ಲಾ ಸಮಾಜದ ಸಂಘ-ಸಂಸ್ಥೆಗಳ ಮುಖಂಡರು, ಜನ ಪ್ರತಿನಿಧಿಗಳು, ಶಾಲಾ ಶಿಕ್ಷಕ ವೃಂದ, ಆಶಾ ಕಾರ್ಯಕರ್ತರು, ಪತ್ರಿಕಾ ಪ್ರತಿನಿಧಿಗಳು, ಶಾಲಾ ಮಕ್ಕಳು ಭಾಗಿಯಾಗಿದ್ದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿದ ನೃತ್ಯ ಗಮನ ಸೆಳೆಯಿತು. ಶಾಲೆಗಳಲ್ಲಿ ಸಂವಿಧಾನದ ಮಹತ್ವ ಹಾಗೂ ಸಂವಿಧಾನ ನೀಡಿರುವ ಹಕ್ಕುಗಳ ಕುರಿತು ಪ್ರಬಂಧ ಸ್ಪಧೆರ್Éಯಲ್ಲಿ ವಿಜೇತರಿಗೆ ವೇದಿಕೆಯ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲಾಯಿತು.
ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಸಂಚರಿಸುವ ವೇಳೆಯಲ್ಲಿ ಜಾಥಾಕ್ಕೆ ಕಳಸ, ಪೂರ್ಣಕುಂಭ, ವಿವಿಧ ವಾದ್ಯಮೇಳ, ಬೈಕ್ ರ್ಯಾಲಿ, ನಂದಿಕೋಲು ಕುಣಿತ, ತಮಟೆ, ತಾಷಾರಾಂ ಡೋಲು ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.
ಹಿರೆಮಲ್ಲನಕೇರಿ ಗ್ರಾಮ ಪಂಚಾಯಿತಿ: ಹಿರೆಮಲ್ಲನಕೇರಿ ಗ್ರಾಮ ಪಂಚಾಯಿತಿಯಲ್ಲಿ ಸಹ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು. ಗ್ರಾಮ ಪಂಚಾಯಿತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯವರೆಗೆ ಹಾಗೂ ಆಂಜನೇಯ ದೇವಸ್ತಾನದವರೆಗೆ ನಡೆದ ಜಾಥಾದಲ್ಲಿ ಹಿರೆಮಲ್ಲನಕೆರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ, ಸರ್ವ ಸದಸ್ಯರು ಉಪಸ್ಥಿತರಿದ್ದರು.
