ಉದಯವಾಹಿನಿ, ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ವರ್ಧಿಸಬೇಕೆಂದು ಬಯಸಿ ಕೋಲಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿಮ್ಮ ಬೇಡಿಕೆಗಳ ಕುರಿತು ಏನೇನು ಭರವಸೆ ನೀಡಿದ್ದರೂ ಅವುಗಳೆಲ್ಲಾವನ್ನು ಈಡೇರಿಸಲು ಶ್ರಮಿಸುತ್ತೇನೆಂದು ರಾಜ್ಯ ನಗರಾಭಿವೃದ್ದಿ ಮತ್ತು ಪಟ್ಟಣ ಯೋಜನೆಯ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಆಶ್ವಾಸನೆ ನೀಡಿದರು
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಮಹಿಳೆಯರ ಉಚಿತ ಬಸ್ ಪ್ರಯಾಣ ಚಾಲನೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ನಿಮ್ಮೆಲ್ಲಾರ ಆಶೀರ್ವಾದದಿಂದ ಇಂದು ಕಾಂಗ್ರೇಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಿದೆ. ನೀವು ನಮ್ಮನ್ನು ಗೆಲ್ಲಿಸದಿದ್ದರೆ ನಾವು ನೀಡಿದಂತ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲು ಅಗುತ್ತಿರಲಿಲ್ಲ ಎಂದು ಹೇಳಿದರು,
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಮಹಿಳೆಯರ ಶಕ್ತಿ ಯೋಜನೆಯನ್ನು ಚುನಾವಣೆಗೆ ಮುನ್ನ ಕಾಂಗ್ರೇಸ್ ಪಕ್ಷವು ರಾಜ್ಯದ ಜನತೆ ೫ ಪ್ರಮುಖ ಆಶ್ವಾಸನೆಗಳನ್ನು ನೀಡಿತ್ತು. ಅದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದ ಶಕ್ತಿ ಯೋಜನೆ, ಮನೆಯ ಯಾಜಮಾನಿ ಬ್ಯಾಂಕ್ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ಮಾಸಿಕ ೨ ಸಾವಿರ ರೂ, ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್, ಪದವಿಧರ ನಿರುದ್ಯೋಗಿಗೆ ಮಾಸಿಕ ೩ ಸಾವಿರೂ. ಡಿಪ್ಲೋಮೂ ಮಾಡಿದವರಿಗೆ ೧೫೦೦ರೂ ನೀಡುವಂತ ಸೌಲಭ್ಯಗಳನ್ನು ನೀಡುವ ಗ್ಯಾರೆಂಟಿ ಕಾರ್ಡ ವಿತರಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು,
ಮಹಿಳೆಯರು ಇಂದಿನಿಂದ ತಮ್ಮ ಗುರುತಿನ ಚೀಟಿ ತೋರಿಸಿ ರಾಜ್ಯದ ೩೦ ಜಿಲ್ಲೆಗಳಿಗೂ ಎಷ್ಟು ಬಾರಿಯಾದರೂ ಉಚಿತವಾಗಿ ಸಂಚರಿಸ ಬಹುದಾಗಿದೆ .ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಮೊದಲನೆ ಹಂತವಾಗಿ ಸರ್ಕಾರ ರಚನೆಯಾದ ೨೦ ದಿನದಲ್ಲಿ ಏಕಕಾಲದಲ್ಲಿ ಚಾಲನೆ ನೀಡಲಾಗುತ್ತಿದೆ. ಮಹಿಳೆಯರು ಇದನ್ನು ಸದ್ಬಳಿಸಿ ಕೊಳ್ಳ ಬೇಕೆಂದು ಕರೆ ನೀಡಿದರು,
ಆಗಸ್ಟ್ ೧೫ ರಿಂದ ಪ್ರತಿ ತಿಂಗಳು ಮನೆ ಯಾಜಮಾನಿಗೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ೨ ಸಾವಿರೂ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಜುಲೈ ೧ ರಿಂದ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು, ಪ್ರತಿಯೊಬ್ಬ ಪಡಿತರ ಚೀಟಿ ಹೊಂದಿರುವ ವ್ಯಕ್ತಿಗೆ ೧೦ ಕೆ.ಜಿ. ಉಚಿತ ಅಕ್ಕಿ, ಪದವಿಧರರನಿಗೆ ೩ ಸಾವಿರ ಮತ್ತು ಡಿಪ್ಲೋಮ ಮಾಡಿರುವವರಿಗೆ ೧೫೦೦ ರೂ ನೀಡಲಾಗುವುದು ಕಾಂಗ್ರೇಸ್ ಪಕ್ಷವು ಕೊಟ್ಟ ಮಾತಿಗೆ ತಪ್ಪಿ ನಡೆಯುವುದಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!