
ಉದಯವಾಹಿನಿ,ಬಸವನಬಾಗೇವಾಡಿ: ಜಗತ್ತಿನಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠವಾಗಿದೆ ಎಂದು ಶಿಕ್ಷಕ ಸೋಮಶೇಖರ ಕಾರಜೋಳ ಹೇಳಿದರು.
ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನೂತನ ಆಂಗ್ಲ ಪದವಿ ಕಾಲೇಜು ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಂವಿಧಾನ ಎಂದರೆ ನ್ಯಾಯ, ಆರ್ಥಿಕತೆ, ಸಂಪಂತ್ತನ್ನು ಸರಿದೂಗಿಸುವ ವ್ಯವಸ್ಥೆಯಾಗಿದೆ, ಸಂವಿಧಾನವು ಸಾಮಾಜಿಕ ಆರ್ಥಿಕ, ರಾಜಕೀಯ ನ್ಯಾಯದ, ತಿಳುವಳಿಕೆಯನ್ನು ಒಳಗೊಂಡಿದ್ದು ಇಂದಿನ ಯುವ ಪೀಳಿಗೆಗೆ ಸಂವಿಧಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಸ್ಥಬ್ದ ಚಿತ್ರ ಮೆರಣಿಗೆ ಕಾರ್ಯಕ್ರಮವು ಸ್ವಾಗಥಾರ್ಹವಾಗಿದೆ ಎಂದರು.
ಈ ಸಂಧರ್ಭದಲ್ಲಿ ಮಸಬಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೀಜಾ ಮೈರಾ, ಉಪಾಧ್ಯಕ್ಷ ಶರಣು ಪಡಸಲಗಿ, ಸದಸ್ಯರಾದ ಶಿವಾನಂದ ಹಿರೇಮಠ, ಅಪ್ಪಾಸಾಹೇಬ ಮಡಗೊಂಡ, ದ್ಯಾವನಗೌಡ ಪಾಟೀಲ, ರಾಜುಗೌಡ ಪಾಟೀಲ, ಶಿವಾನಂದ ಮೂರಮಾನ, ಪರಶುರಾಮ ದಿಂಡವಾರ, ಅಶೋಕ ಚಲವಾದಿ, ಮಹಾಂತೇಶ ಸಾಸಾಬಾಳ, ಸಿ ಟಿ ಮಾದರ, ಗ್ರೆಡ್-2 ಹಶೀಲ್ದಾರ ಗುರು ನಾಯಕ, ನೂಡಲ್ ಅಧಿಕಾರಿ ರುದ್ರೇಶ ಚಿತ್ತರಗಿ, ಸಮಾಜ ಕಲ್ಯಾಣ ಇಲಾಖೆಯ ಭವಾನಿ ಪಾಟೀಲ, ಬಿಇಒ ವಸಂತ ರಾಠೋಡ, ಪಿಡಿಒ ಶ್ರೀಶೈಲ ತಳವಾರ, ಜಗದೀಶ ಬಾಗೇವಾಡಿ, ಬಸು ಬೈಚಬಾಳ, ಸೇರಿದಂತೆ ಮುಂತಾದವು ಇದ್ದರು. ಎನ್ ಎಚ್ ಯೋಗೇಶ್ವರ ಸಂವಿಧಾನ ಪಿಠೀಕೆ ಓದಿದರು. ಆಯ್ ಎಮ್ ಅಳ್ಳಗಿ ಕಾರ್ಯಕ್ರಮ ನಿರೂಪಿಸಿದರು, ವಿನೋದ ನಾಗಾವಿ ವಂದಿಸಿದರು.
