ಉದಯವಾಹಿನಿ, ಶಿಡ್ಲಘಟ್ಟ: ಸರ್ಕಾರದ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತರಾಗಿ ೧೨ ವರ್ಷದಿಂದ ಎರಡು ಊರುಕೋಲುಗಳ ಮೇಲೆ ನನ್ನ ಜೀವನವಾಗಿದೆ. ಬದುಕುವ ಆಸೆ ಇಟ್ಟುಕೊಂಡು ಬದುಕುತ್ತಿದ್ದೇನೆ. ಎಸ್ ಎಸ್ ಎಲ್ ಸಿ ಮುಗಿಯುವವರಿಗೂ ಎಲ್ಲವೂ ಸರಿ ಇದ್ದ ನಾನು ಇದ್ದಕಿದ್ದಂತೆ ಅಂಗವಿಕಲತೆಯ ಶಾಪ ನನಗೆ ತಟ್ಟಿದೆ ಅಂದಿನಿಂದ ಇಂದಿನವರಿಗೂ ಜೀವನ ನಡೆಸಲು ಹರಸಾಹಸ ಪಡುವಂತಾಗಿದೆ ಎಂದು ವಿಕಲಾಂಗ ನರೇಶ್ ಅಳಲನ್ನು ತೊಡಿಕೊಂಡರು.
ಸರ್ಕಾರದಿಂದ ಅಂಗವಿಕಲ ಸಹಾಯಧನವಾಗಿ ೧೪೦೦ ಬಿಟ್ಟರೆ ಬೇರೆ ಯಾವುದೇ ಮೂಲ ಸೌಲಭ್ಯಗಳು ಇಲ್ಲ ಓಡಾಡಲು ವಾಹನಕ್ಕಾಗಿ ಅನೇಕ ಬಾರಿ ಅರ್ಜಿಗಳನ್ನು ಹಾಕಿದರೂ ಪ್ರಯೋಜನ ಇಲ್ಲ ನನಗೆ ಮೂಲ ಭೂತ ಸೌಲಭ್ಯ ಅಥವಾ ಸ್ವಂತ ದುಡಿಯಲು ಉದ್ಯೋಗ ಕೊಟ್ಟರೆ ಸಾಕು ದುಡಿದು ನಾನು ನಮ್ಮ ತಾಯಿ ಜೀವನ ಸಾಗಿಸುತ್ತೇವೆ ಎಂದರು.
ನಗರ ಮಟ್ಟದ ಅಧಿಕಾರಿಗಳಿಂದ ಹಿಡಿದು ವಿಧಾನಸಭೆ ಉನ್ನತ ಸ್ಥಾನ ಅಲಂಕರಿಸಿದ ಜನಪ್ರತಿನಿಧಿಗಳು ಇದ್ದರು ಕೂಡಾ ನನ್ನಂತಹವರು ೧೨ ವರ್ಷಗಳಿಂದ ಮೂಲ ಸೌಲಭ್ಯಗಳು ಸಿಗದೆ ಇದುವರಿಗೂ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಜೀವನ ನಡೆಸುವಂತ ಸ್ಥಿತಿ ನನ್ನದಾಗಿದೆ.
ನಮಗೆ ಸ್ವಂತ ಮನೆ ಇಲ್ಲ ಸರ್ಕಾರದಿಂದ ಸದ್ಯಕ್ಕೆ ಬರುತ್ತಿರುವ ಹಣ ಮನೆ ಬಾಡಿಗೆ ಕಟ್ಟಲು ಸಾಲುತ್ತಿಲ್ಲವಾಗಿದ್ದು ನಾನು ನಮ್ಮ ತಾಯಿ ಜೀವನ ಸಾಗಿಸುವುದು ಹೇಗೆ ನಾವು ವಾಸ ಮಾಡುವುದಕ್ಕೆ ನೆಲೆ ಇಲ್ಲದೆ ತುಂಬಾ ತೊಂದರೆಯಾಗಿದ್ದು ಸೊಪ್ಪು ಮಾರಿ ಜೀವನ ಸಾಗಿಸುವ ನಮ್ಮ ಚಿಕ್ಕಪ್ಪನ ಮನೆ ಮತ್ತು ನಮ್ಮ ತಾಯಿಯ ತವರು ಮನೆಯಲ್ಲಿ ನಾನು ನಮ್ಮ ತಾಯಿ ಇಬ್ಬರೂ ಜೀವನ ನಡೆಸುತ್ತಿದ್ದೇವೆ ಎಂದು ನಿಸ್ಸಹಾಯಕ ಮಾತುಗಳಾಗಿದ್ದವು.

 

Leave a Reply

Your email address will not be published. Required fields are marked *

error: Content is protected !!