ಉದಯವಾಹಿನಿ, ಆನೇಕಲ್ : ಜಿಗಣಿ ಸಮೀಪವಿರುವ ನಿಸರ್ಗ ಬಡಾವಣೆಯಲ್ಲಿ ಸಂಸದ ಡಿ.ಕೆ.ಸುರೇಶ್ ರವರ ಸಹಬಾಗಿತ್ವ ಮತ್ತು ಸುದರ್ಶನ್ ಡೆವಲಪರ್ ನ ಮುಖ್ಯಸ್ಥರಾದ ವಿನಯ್ ಗೌಡ ರವರ ನೇತೃತ್ವದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರವನ್ನು ಏರ್ಪಡಿಸಲಾಗಿತ್ತು.
ಇನ್ನು ದಿ ಆಕ್ಸ್ ಪರ್ಡ್ ಆಸ್ಪತ್ತೆ ಮತ್ತು ಕಾವೇರಿ ಆಸ್ಪತ್ತೆ ಹಾಗೂ ವೆಂಕಟೇಶ್ವರ ದಂತ ಮಹಾ ವಿದ್ಯಾಲಯ ಹಾಗೂ ಆಸ್ಪತ್ತೆ ಮತ್ತು ನಿಸರ್ಗ ದೃಷ್ಠಿದಾಮ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಭಿರ ಹಾಗೂ ರಕ್ತದಾನ ಶಿಭಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರಾದ ಆರ್.ಕೆ. ರಮೇಶ್, ನಿಸರ್ಗ ಸೇವಾ ಟ್ರಸ್ಟ್ ಅಧ್ಯಕ್ಷ ನಿಸರ್ಗ ದೇವರಾಜ್ ನಾಯ್ಕ್ ಸೇರಿದಂತೆ ಅತಿಥಿಗಳು, ಜನಪ್ರತಿನಿಧಿಗಳು ಮತ್ತು ಬಡಾವಣೆಯ ನಿವಾಸಿಗಳು ಬಾಗವಹಿಸಿದ್ದರು.
