ಉದಯವಾಹಿನಿ, ಕಲಬುರಗಿ: ಶಹಬಾದ ಬಳಿಯ ಕಾಗಿಣಾ ನದಿಗೆ ಬಿದ್ದು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಸಂಭವಿಸಿದೆ.
ಕಲಬುರಗಿ ನಗರದ ಅಣೆಮ್ಮ ನಗರ ನಿವಾಸಿಗಳಾದ ಸುಮಲತಾ( 47 ) ಹಾಗೂ ವರ್ಷಾ( 17 ) ಆತ್ಮಹತ್ಯೆಗೆ ಶರಣಾದ ತಾಯಿ ಮಗಳು.
ನಿನ್ನೆ ಸಾಯಂಕಾಲದಿಂದ ಅವರಿಬ್ಬರು ಮನೆಯಿಂದ ಕಾಣೆಯಾಗಿದ್ದರು. ಅವರು ಸೋಮವಾರ ರಾತ್ರಿ ಶಹಬಾದ ಬಳಿ ಕಾಗಿಣಾನದಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು,ಅವರ ಶವ ಇಂದು ಬೆಳಿಗ್ಗೆ ಪತ್ತೆಯಾಗಿವೆ.
ಶಹಬಾದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
