ಉದಯವಾಹಿನಿ, ಬೆಂಗಳೂರು:  ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ರೈಲು ನಿಗಮವು ಸೆಲ್ಫಿ ಪ್ರಿಯರಿಗಾಗಿ ಸೆಲ್ಫಿ ಪಾಯಿಂಟ್ ಗಳನ್ನು ನಿರ್ಮಾಣ ಮಾಡಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗದ ಬನಶಂಕರಿ ಮತ್ತು ಕೋಣನಕುಂಟೆ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ್ ರೀತಿಯ ಪರದೆ ಹಾಕಿ, ಅದರ ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ಮೊಬೈಲ್‌ನಲ್ಲೇ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸೆಲ್ಫಿ ಪಾಯಿಂಟ್‌ಗಾಗಿ ಹೆಚ್ಚು ಸ್ಥಳ ಮೀಸಲು ಇಡಲಾಗಿದೆ. ಲೈಟಿಂಗ್‌ನಿಂದ ಕಂಗೊಳಿಸುತ್ತಿರುವ ಸೆಲ್ಫಿ ಪಾಯಿಂಟ್ ಅನ್ನು ನೋಡಿ ಪ್ರಯಾಣಿಕರು ಪುಲ್ ಖುಷ್ ಆಗಿದ್ದಾರೆ. ನಗರದಲ್ಲಿ ವೇಗ ಮತ್ತು ಸುಗಮ ಸಂಚಾರಕ್ಕೆ ನಮ್ಮ ಮೆಟ್ರೋ ಹೆಸರಾಗಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ಸುರಕ್ಷತಾ ಕ್ರಮಗಳನ್ನು ನಿಗಮ ಜಾರಿಗೆ ತರತ್ತಲೇ ಇದೆ.

Leave a Reply

Your email address will not be published. Required fields are marked *

error: Content is protected !!