ಉದಯವಾಹಿನಿ, ವಿಜಯಪುರ : ಮನುಷ್ಯ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಕಂಡುಕೊಂಡ ವಿಧಿಯನ್ನು ವೈಜ್ಞಾನಿಕ ವಿಧಿ ಎಂದು ಕರೆಯಲಾಗುತ್ತಿದ್ದು ವಿಜ್ಞಾನದಲ್ಲಿ ೧೦ ಹಲವು ವಿಭಾಗಗಳು ರೂಪುಗೊಂಡಿದ್ದು ರಾಸಾಯನಿಕ ವಿಜ್ಞಾನ, ಭೌತವಿಜ್ಞಾನ, ಜೀವವಿಜ್ಞಾನ, ಸಮಾಜ ವಿಜ್ಞಾನ, ಮುಂತಾಗಿ ವಿಭಾಗಗಳು ರೂಪುಗೊಂಡಿವೆ ಎಂದು ಸರ್ಕಾರಿ ಮಾದರಿ ಬಾಲಕಿಯರ ಪಾಠಶಾಲಾ ಮುಖ್ಯೋಪಾಧ್ಯಾಯರಾದ ಮನೋಹರ್ ರವರು ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಅಗಸ್ತ್ಯ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾ ಉಪಾಧ್ಯಕ್ಷರಾದ ಕೇಶವಪ್ಪ ರವರು ಮಾತನಾಡುತ್ತ ಯಾವುದೇ ವಿಷಯವನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳುವುದೇ ವಿಜ್ಞಾನವಾಗಿದೆ ಎಂದು ತಿಳಿಸಿದರು.
೬ನೇ ವಾರ್ಡ್ ನ ಪುರಸಭಾ ಸದಸ್ಯರಾದ ಶಿಲ್ಪ ಅಜಿತ್ ರವರು ಮಾತನಾಡಿ ವಿಜ್ಞಾನವೆಂಬುದು ಇಂದಿನ ಕಾಲದಲ್ಲಿ ವಿಶಾಲಾರ್ಥದಲ್ಲಿದ್ದು ಗ್ರಂಥಾಲಯವಿಜ್ಞಾನ, ಗಣಕ ವಿಜ್ಞಾನ, ಸಮಾಜ ವಿಜ್ಞಾನ, ರಾಜಕೀಯ ವಿಜ್ಞಾನ, ಇನ್ನೂ ಹತ್ತು ಹಲವಾರು ವಿಧಗಳಲ್ಲಿ ಶೈಕ್ಷಣಿಕ ಅಧ್ಯಯನ ಕ್ಷೇತ್ರಗಳಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ೨೦೦ ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಲಾಗಿದ್ದು, ಪಟ್ಟಣದ ಹತ್ತು-ಹಲವು ಶಾಲೆಗಳ ವಿದ್ಯಾರ್ಥಿಗಳು ವಿಜ್ಞಾನ ಮೇಳಕ್ಕೆ ಭೇಟಿ ನೀಡಿ, ಪರಿಚಯ ಮಾಡಿಕೊಂಡರು.
ತಾಲೂಕು ಶಿಕ್ಷಣ ಇಲಾಖೆಯ ಸಿಆರ್‌ಪಿ ದಿನೇಶ, ಬಿಆರ್‌ಪಿ ಸಮೀರ, . ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಾಧಾ, ಸದಸ್ಯರಾದ ಮಾಲಾ, ಸಂಪದ, ರಮೇಶ್, ಶಿಕ್ಷಕರಾದ ಮಾಧವಿ, ಸೀಮಾ, ಶೋಭಾ, ಸರಸ್ವತಿ, ಮಮತಾ, ರಾಜೇಶ್ವರಿ, ಶ್ರೀನಿವಾಸ, ನಾಗರಾಜ್, ಅಗಸ್ತೈ ಫೌಂಡೇಶನ್ ಗೋವಿಂದರಾಜು, ಗುರುಮೂರ್ತಿ, ಮಾಲಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!