ಉದಯವಾಹಿನಿ, ಗಂಗಾವತಿ: ತಾಲೂಕಿನ ಹೇರೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾದಲ್ಲಿ ನಾಲ್ಕು ವರ್ಷದ ಅಂಗನವಾಡಿ ಬಾಲಕನೊಬ್ಬ ಸಂವಿಧಾನ ಪೀಠಿಕೆ ಪಠಣ ಮಾಡಿ ಎಲ್ಲರ ಗಮನಸೆಳೆದ್ದಾನೆ.
ತಾಲೂಕಿನ ಹೇರೂರು ಗ್ರಾಮದ 4ನೇ ಅಂಗನವಾಡಿ ಕೇಂದ್ರದ ಬಾಲಕ ಭದ್ರೇಶ ತಂದೆ ವೀರೇಶ ಎಂಬ ಪೋರ ಎರಡೂವರೆ ನಿಮಿಷಗಳ ಕಾಲ ಸಂವಿಧಾನ ಪೀಠಿಕೆ ಪಠಣ ಮಾಡಿ ನೆರೆದಿದ್ದವರ ಮನಸ್ಸು ಗೆದ್ದಿದ್ದಾನೆ. ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಗ್ರಾಮದ ಶಾಲಾ ಮಕ್ಕಳು ಮಹನೀಯರ ವೇಷಭೂಷಣ ಧರಿಸಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಹೇರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೇಘರಾಣಿ ಬಿ.ಮರಕುಂಬಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಹೂಮಾಲೆ ಹಾಕಿ ಜಾಥಾಗೆ ಸ್ವಾಗತಿಸಿದರು. ನಂತರ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ಗ್ರಾ.ಪಂ. ಉಪಾಧ್ಯಕ್ಷರಾದ ನಾಗಪ್ಪ, ಸಿಡಿಪಿಓ ಪ್ರವೀಣ್ ಹೇರೂರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ರವಿಶಾಸ್ತ್ರಿ, ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀದೇವಿ, ಅಂಗನವಾಡಿ ಕಾರ್ಯಕರ್ತೆ ಶಭಾನಮೇಗಂ, ಗ್ರಾಪಂ ಸದಸ್ಯರು, ಕನ್ನಡಪರ ಸಂಘಟನೆ ಮುಖಂಡರು, ದಲಿತಪರ ಸಂಘಟನೆಗಳ ಮುಖಂಡರು ಸೇರಿ ಗ್ರಾಪಂ ಸಿಬ್ಬಂದಿಗಳು ಇದ್ದರು.
