
ಉದಯವಾಹಿನಿ ದೇವನಹಳ್ಳಿ : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಯೋಗ, ಕರಾಟೆ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ದೇವನಹಳ್ಳಿ ಪಟ್ಟಣದ ಎಸ್.ಎಲ್.ಎಸ್. ಶಾಲೆಯ ಮಕ್ಕಳು ಪಾಲ್ಗೊಂಡು, 8 ಚಿನ್ನ, 3 ಬೆಳ್ಳಿ ಪದಕಗಳನ್ನು ಪಡೆದುಕೊಂಡಿರುತ್ತಾರೆ ಎಂದು ಶಾಲೆಯ ಕಾರ್ಯದರ್ಶಿ ಡಿ.ಎಸ್.ಧನಂಜಯರವರು ತಿಳಿಸಿದರು. ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಯೋಗ ಸ್ಪರ್ಧೆಯಲ್ಲಿ ಕೃತಿಕ ಗೌಡ ಜಿ.ಎಂ. ಪ್ರಥಮ ಸ್ಥಾನ, ಸಂಪ್ರೀತ್ ಯಾದವ್ ಪ್ರಥಮ ಸ್ಥಾನ, ಜೀವಿತ ಪ್ರಥಮ ಸ್ಥಾನ, ಗುಣಶ್ರೀ ಪ್ರಥಮ ಸ್ಥಾನ, ನಿತಿನ್ ಗೌಡ ಪ್ರಥಮ ಸ್ಥಾನ ಹಾಗೂ ವಿಶ್ವಾಸ್ ಗೌಡ ಪ್ರಥಮ ಸ್ಥಾನ, ಕರಾಟೆ ಸ್ಪರ್ಧೆಯಲ್ಲಿ ದೀಕ್ಷಿತ್ ಪ್ರಥಮ ಸ್ಥಾನ ಹಾಗೂ ಜಯಂತ್ ಡಿ.ಎಸ್. ಪ್ರಥಮ ಸ್ಥಾನ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ಸಂಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ಜಿಲ್ಲಾ ಮಟ್ಟದಲ್ಲಿ ಯೋಗ, ಕರಾಟೆ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಶಾಲಾ ಆವರಣದಲ್ಲಿ ಪ್ರಶಸ್ತಿ ಪತ್ರ ಮತ್ತು ಪದಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿ, ನಮ್ಮ ಶಾಲೆಯ ಮಕ್ಕೆಳು ಯೋಗ, ಕರಾಟೆ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, 8 ಚಿನ್ನ, 3 ಬೆಳ್ಳಿ ಪದಕಗಳನ್ನು ಪಡೆದುಕೊಂಡು, ಶಾಲೆಗೆ ಗೌರವವನ್ನು ತಂದು ಕೊಟ್ಟಿರುತ್ತಾರೆ. ಈ ಎಲ್ಲಾ ಮಕ್ಕೆಳು, ವಿಭಾಗಮಟ್ಟ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶೈಲಾ ಧನಂಜಯ್, ಯೋಗ ಶಿಕ್ಷಕರಾದ ಪಿ.ಶ್ರೀಕಾಂತ್, ಕರಾಟೆ ಶಿಕ್ಷಕರಾದ ಮುತ್ತಣ್ಣ ಪಿ.ಬಿ. ಹಾಗೂ ಉಪಮುಖ್ಯಶಿಕ್ಷಕರಾದ ನಿಜಲಿಂಗಪ್ಪ ಕೆ ಹಾಗೂ ಎಲ್ಲಾ ಶಾಲಾ ವೃಂದದವರು ಉಪಸ್ಥಿತರಿದ್ದರು.