ಉದಯವಾಹಿನಿ,ತಾಳಿಕೋಟಿ: ದೇ.ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಇವರಿಗೆ ಬ.ಸಾಲವಾಡಗಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸೋಮನಗೌಡರು ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿರುವೆ, ನಮ್ಮ ಕಾರ್ಯಕರ್ತರು ಸರ್ಕಾರದ ಕಾರ್ಯಕ್ರಮಗಳನ್ನು ಪ್ರತಿ ಮನೆಗೂ ಮುಟ್ಟಿಸುವಂಥಹ ಕೆಲಸ ಮಾಡಬೇಕು ಕಾರ್ಯಕರ್ತರು ತಲೆ ಎತ್ತಿ ಗೌರವದಿಂದ ತಿರಗುವ ರೀತಿಯಲ್ಲಿ ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ ಯಾರಿಗೂ ಭಯಪಡುವ ಅಗತ್ಯ ಇಲ್ಲ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮಲ್ಲನಗೌಡ ಹೊಸಮನಿ,(ಗುಂಡಕನಾಳ), ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಮಾಜಿ ಅಧ್ಯಕ್ಷ ಯಮನಪ್ಪಗೌಡ ಹೊರಗಿನಮನಿ, ಗುರುಗೌಡ ಗುರಡ್ಡಿ, ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ, ಸಾಹೇಬಗೌಡ ರಾರಡ್ಡಿ, ತಾ.ಪಂ ಮಾಜಿ ಸದಸ್ಯ ಬಸನಗೌಡ ಬಿರಾದಾರ(ಪೀರಾಪೂರ), ಜಿ.ಪಂ ಮಾಜಿ ಸದಸ್ಯ ಸಾಹೇಬಣ್ಣ ಆಲ್ಯಾಳ, ತಾ.ಪಂ. ಸದಸ್ಯ ಸೋಮನಗೌಡ ಹಾದಿಮನಿ, ಬಸನಗೌಡ ಪಾಟೀಲ ಲಕ್ಕುಂಡಿ, ಸಿದ್ದು ಬುಳ್ಳಾ, ರಮೇಶ ಮಸಬಿನಾಳ, ಭೀಮನಗೌಡ ಸಿದರಡ್ಡಿ ಪಿಡಿಓ ನಿಂಗನಗೌಡ ದೊಡಮನಿ, ಮುತ್ತುರಾಜ ಜಾಗೀರದಾರ, ಇದ್ದರು.

Leave a Reply

Your email address will not be published. Required fields are marked *

error: Content is protected !!