ಉದಯವಾಹಿನಿ, ಹೊಸಪೇಟೆ : ಕಾಂತ್ರಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಆಜಾದ್ ಪುಣ್ಯತಿಥಿಯನ್ನು ಬಲಿದಾನ ದಿವಸವಾಗಿ ಪತಂಜಲಿ ಯೋಗ ಸಮಿತಿ ಆಚರಿಸಲಿದೆ ಎಂದು ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಕಿರಣ್‍ಕುಮಾರ ಹಾಗೂ ರಾಮಲಿಂಗೇಶ್ವರ ಯೋಗ ಕೇಂದ್ರದ ಮುಖ್ಯಸ್ಥ ಶ್ರೀಧರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು ಪತಂಜಲಿ ಯೋಗಸಮಿತಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ದಿನಗಳನ್ನು ಆಚರಿಸುತ್ತಾ ಬಂದಿದ್ದು ಯುವ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್‍ರವರ ಪುಣ್ಯತಿಥಿಯನ್ನು ಬಲಿದಾನ ದಿವಸವಾಗಿ ಆಚರಿಸುತ್ತಿದ್ದು ಹೊಸಪೇಟೆಯ ಯೋಗ ಕೇಂದ್ರಗಳ ಮುಖ್ಯಸ್ಥರು, ಸಂಚಾಲಕರು ಬಲಿದಾನ ದಿವಸವನ್ನು ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆಚರಿಸಲಿದ್ದು ಬೆಳಿಗ್ಗೆ 5.30 ರಿಂದ 6.20 ರವರೆಗೆ ಯೋಗ, ಧ್ಯಾನ್ಹ, ಪ್ರಾಣಾಯಾಮಗಳನ್ನು ನಡೆಸಿ ನಂತರ ಬಲದಾನ ದಿವಸ್ ಕಾರ್ಯಕ್ರಮವನ್ನು ಆಚರಿಸಲಿದೆ. ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು ವಿವಿಧ ಕೇಂದ್ರಗಳ ಮುಖ್ಯಸ್ಥರು ಹಾಗೂ ಯೋಗಸಾಧಕರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
