ಉದಯವಾಹಿನಿ, ವಿಜಯಪುರ: ಧೈರ್ಯ ಮತ್ತು ಶೌರ್ಯಕ್ಕೆ ಹೆಸರಾದ ಶ್ರೇಷ್ಠ ನಾಯಕ ಛತ್ರಪತಿ ಶಿವಾಜಿಯವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಿವಾಜಿಯವರ ಸಾಹಸಗಾಥೆ ಒಂದು ಪ್ರೇರಣೆಯಾಗಿತ್ತು ಎಂದು ವಿಶ್ವ ವಿಜೇತ ಸ್ವಾಮಿ ವಿವೇಕಾನಂದ ಬಳಗದ ಮುಖ್ಯಸ್ಥ ಲಕ್ಷಣ್ ಹೇಳಿದರು.
ಇವರು ಪಟ್ಟಣದ ಅಂಕತಟ್ಟಿ ನಂಜುಂಡಪ್ಪ ವೃತ್ತದ ಬಳಿ ವಿಶ್ಪ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ವತಿಯಿಂದ ಆಯೋಜಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರ ಪುತ್ಥಳಿಗೆ ಪುಷ್ವನಮನ ಸಲ್ಲಿಸಿ ಮಾತನಾಡಿದರು.
ಯುವ ಸಮೂಹವು ದುಶ್ಟಟಗಳಿಗೆ ಒಳಗಾಗದೇ, ಇಂತಹ ಮಹಾನ್ ವ್ಯಕ್ತಿಗಳ ಜಯಂತಿಗಳು ಪೋಟೋಗೆ ಸೀಮಿತವಾಗದೆ. ಪ್ರತಿನಿತ್ಯವು ಜಯಂತೋತ್ಸವವಾಗಲಿ ಎಂದರು.
ಭಾರತ ದೇಶವನ್ನು ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ಪ್ರಬಲ ತಡೆ ಒಡ್ಡಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಮರುಸ್ಥಾಪಿಸಿದವರು ಛತ್ರಪತಿ ಶಿವಾಜಿ ಮಹಾರಾಜರಾಗಿದ್ದರು ಎಂದರು.
ಹಿಂದೂ ಸಮಾಜದ ಮೇಲೆ ನಡೆದ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು. ಅವರು ಚರಿತ್ರೆ ಮಾತ್ರ ಬದಲಾಯಿಸಲಿಲ್ಲ. ಹೊಸ ಚರಿತ್ರೆಯನ್ನು ರಚಿಸಿದರು. ಚಾರಿತ್ರ್ಯವಂತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಅವರು ಪ್ರಜೆಗಳನ್ನು ಸುಭಿಕ್ಷವಾಗಿಟ್ಟಿದ್ದರು. ಅಪ್ರತಿಮ ದೇಶಭಕ್ತನ, ಜೀವನಚರಿತ್ರೆಯನ್ನು ಸ್ಮರಿಸಬೇಕು. ಶಿವಾಜಿಯವರ ಕುಲಕ್ಕೆ ಸೇರಿದ ಕ್ಷತ್ರಿಯರು ಅವರ ಜಯಂತಿ ಆಚರಿಸಿರುವುದು ಶ್ಲಾಘನೀಯ ಎಂದರು.
ಪುರಸಭಾ ಮಾಜಿ ಸದಸ್ಯ ಆರ್.ಸಿ.ಮಂಜುನಾಥ್ ಮಾತನಾಡಿ, ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಗೊಳಿಸಿ ರಕ್ಷಿಸುವಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದದ್ದಾಗಿದೆ. ಇಂತಹ ಮಹಾನ್ ವ್ಯಕ್ತಿಯು ಯಾವುದೇ ಒಂದು ಜನಾಂಗಕ್ಕೆ ಮಾತ್ರ ಸೀಮಿತಗೊಳ್ಳದೆ, ರಾಷ್ಟ್ರನಾಯಕರಾಗಿ ಧರ್ಮ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಅವರ ತ್ಯಾಗ, ಬಲಿದಾನದ ಪರಿಣಾಮವಾಗಿ ಇಂದು ಸಮಾಜದಲ್ಲಿ ಜನರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದರು.
ಪುರಸಭಾ ಅಧ್ಯಕ್ಷರಾದವಿಮಲ ಬಸವರಾಜ್, ಉಪಾಧ್ಯಕ್ಷ ಕೇಶವಪ್ಪ, ಮುಖಂಡರಾದ ಎಸ್,ಆರ್, ಎಸ್, ಬಸವರಾಜ್, ಕನಕರಾಜ್, ಭಗವನ್ ರಾಮು, ರವಿಕುಮಾರ್, ಪ್ರಭು, ಉಮೇಶ್, ಮುನಿವೀರಣ್ಣ, ಬಾಬು, ಚಂದನ್, ಮೌನಿ, ವಿಶ್ವನಾಥ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ, ಬಜರಂಗದಳ ಜಿಲ್ಲಾ ಸಹ ಸಂಚಾಲಕ ಕೃಷ್ಣಮೂರ್ತಿ, ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರಮೇಶ್ ಬಾಬು, ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಶ್ ಬಾಬು, ತಾಲೂಕು ಬಜರಂಗದಳ ಸಂಚಾಲಕ ಶಿವಾಜಿ ಮಣಿ, ಸಹ ಸಂಚಾಲಕ ನವೀನ್, ಬಜರಂಗದಳ ಪದಾಧಿಕಾರಿಗಳಾದ ಬಲರಾಮ್, ಅಕ್ಷಯ್, ಮುನಿ ಕೃಷ್ಣ, ನರಸಿಂಹ, ದರ್ಶನ, ನಿರಂಜನ್, ರಾಹುಲ್, ಗೌತಮ್,ರವಿ ಇದ್ದರು.

Leave a Reply

Your email address will not be published. Required fields are marked *

error: Content is protected !!