ಉದಯವಾಹಿನಿ, ಸುತ್ತೂರು: ನಂಜನಗೂಡು ತಾಲ್ಲೂಕಿನ ಗೋಣಹಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಾರಮ್ಮನವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಮುಂಜಾನೆಯಿಂದಲೇ ಆದಿಶಕ್ತಿ ಅಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ, ಪುಷ್ಪಾಲಂಕಾರ ಸೇವೆಗಳು ನಡೆಯಿತು, ನಂತರ ಬೆಳಿಗ್ಗೆ 9.40 ರಿಂದ 11.07ರ ಶುಭಮಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದಿಂದ ಪ್ರಾರಂಭಗೊಂಡ ರಥೋತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸುಮಾರು 12.30ರ ವೇಳೆಗೆ ಸ್ವಸ್ಥಾನಕ್ಕೆ ತಲುಪಿತು. ಗ್ರಾಮದ ಬೀದಿಗಳ ಇಕ್ಕೆಲಗಳಲ್ಲಿ ನೆರದಿದ್ದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ರಥೋತ್ಸವಕ್ಕೆ ಹಣ್ಣು-ಧವನ ಎಸೆದು ದೇವರಲ್ಲಿ ತಮ್ಮ ಹರಿಕೆಗಳನ್ನು ನೆರವೇರಿಸೆಂದು ಪ್ರಾರ್ಥಿಸಿ ಪುನೀತರಾದರು.ಇದೇ ವೇಳೆ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಬೆಂಗಳೂರು ಜಿಲ್ಲೆಗಳನ್ನೊಳಗೊಂಡಂತೆ ರಾಜ್ಯದ ವಿವಿಧ ಭಾಗಗಳಿಂದ ಮತ್ತು ಗೋಣಹಳ್ಳಿ ಸುತ್ತಮುತ್ತಲ 33 ಹಳ್ಳಿಗಳ ಗ್ರಾಮಸ್ಥರೂ ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸಿದ್ದು, ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾದಿಗಳೆಲ್ಲರಿಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಗರ್ಲೆ ಗೋಣಹಳ್ಳಿ ಮಾರಮ್ಮ ಸೇವಾ ಸಮಿತಿ ಹಾಗೂ ಗುಂಡ್ಲುಪೇಟೆಯ ಗೋಣಹಳ್ಳಿ ಮಾರಮ್ಮ ಸೇವಾಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಗ್ರಾ.ಪಂ ಅಧ್ಯಕ್ಷ ಮಹದೇವಮ್ಮ, ಉಪಾಧ್ಯಕ್ಷೆ ಸುಧಾರಾಣಿ, ದೇವಾಲಯದ ಪ್ರಧಾನ ಅರ್ಚಕ ಗೋಣಹಳ್ಳಿ ಕುಮಾರ್, ಮುಖಂಡರಾದ ನಾರಾಯಣಿ, ಕುಮಾರ, ರಮೇಶ್, ಮುದ್ದನಾಯಕ, ಚಿಕ್ಕಮರಿನಾಯಕ, ಗ್ರಾ.ಪಂ ಎಲ್ಲಾ ಸದಸ್ಯರುಗಳು, ಗ್ರಾಮದ ಎಲ್ಲಾ ಜನಾಂಗದ ಮುಖಂಡರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!