ಉದಯವಾಹಿನಿ, ಬೆಂಗಳೂರು: ಹಳೆಯದಾದ ಮೊಬೈಲ್​ಗಳು; ಗ್ಯಾರಂಟಿ ಯೋಜನೆಗಳ ಸರ್ವೆಗೆ ಅಂಗನವಾಡಿ ಕಾರ್ಯಕರ್ತೆಯರ ಪರದಾಟ
ಅಂಗನವಾಡಿ ಕಾರ್ಯಕರ್ತೆಯರು ತನ್ನ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ಸರ್ಕಾರದಿಂದ ಸರ್ಕಾರಿ ಕೆಲಸಕ್ಕೆ ಅನುಕೂಲವಾಗಲು ನೀಡುವ ಮೊಬೈಲ್​ಗಳಲ್ಲಿ ಸಮಸ್ಯೆ ಕಾಣಿಸುತ್ತಿರುವುದು ವರದಿಗಳಾಗುತ್ತಿರುತ್ತವೆ. ಕಳೆದ ವರ್ಷ ಕಾರ್ಯಕರ್ತೆಯರಿಗೆ ನೀಡಲಾದ ಮೊಬೈಲ್​ಗಳು ಕಾರ್ಯನಿರ್ವಹಿಸುತ್ತಲ್ಲ ಎಂಬ ಸುದ್ದಿಯಾಗಿತ್ತು.
ಇದೀಗ ಮತ್ತೆ ಅಂತಹದ್ದೇ ಆರೋಪ ಕೇಳಿಬಂದಿದ್ದು, ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ, ಫೆ.27: ಮಕ್ಕಳು, ಬಾಣಂತಿ, ಗರ್ಭಿಣಿಯರ ಬಗ್ಗೆ ಮಾಹಿತಿ ಒದಗಿಸುವದು ಸೇರಿದಂತೆ ಅನೇಕ ಕೆಲಸಗಳಿಗಾಗಿ

ಗ್ಯಾರಂಟಿ ಯೋಜನೆಗಳ ಕುರಿತು ಸರ್ವೆ ನಡೆಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಅಲ್ಲದೆ, ಮಾರ್ಚ್ 2ರ ಒಳಗೆ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಆದರೆ, ಈ ಸರ್ವೆ ನಡೆಸಲು ಸರ್ಕಾರಿದಂದ ನಾಲ್ಕು ವರ್ಷಗಳ ಹಿಂದೆ ನೀಡಿದ 2 ಜಿಬಿ ಕೆಪಾಸಿಟಿಯ ಮೊಬೈಲ್​ಗಳು ಕೈಕೊಟ್ಟಿವೆ.
ಹೌದು, ಸರ್ಕಾರದಿಂದ ನೀಡಿರುವ ಮೊಬೈಲ್​ಗಳಿಗೆ ನಾಲ್ಕು ವರ್ಷಗಳಾಗಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2 ಜಿಬಿ ಸ್ಟೋರೇಜ್ ಕ್ಯಾಪಸಿಟಿಯ ಫೋನ್​ಗಳನ್ನು ನೀಡಲಾಗಿದ್ದು, ಇವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಅಂಗನವಾಡಿ ಕಾರ್ಯಕರ್ತೆಯರು ಅಸಮಾಧಾನ ಹೊರಹಾಕಿದ್ದಾರೆ. ದಿನವಿಡಿ ಕಾದರೂ 10 ಜನರ ಸರ್ವೆ ಮಾಡಲಾಗುತ್ತಿಲ್ಲ ಎಂದು ಚಿಕ್ಕಬಳ್ಳಾಪುರದ ಅಂಗನವಾಡಿ ಕಾರ್ಯಕರ್ತೆಯರು ಟಿವಿ9 ಜೊತೆ ಅಳಲು ತೋಡಿಕೊಂಡಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಸಮಸ್ಯೆ ಇಂದು ನಿನ್ನೆಯ ಸಮಸ್ಯೆ ಅಲ್ಲ. ಈ ಹಿಂದೆಯೂ ಮೊಬೈಲ್​ಗಳು ಕೈಕೊಟ್ಟ ಘಟನೆಗಳೂ ನಡೆದಿದ್ದವು. ಮಕ್ಕಳು, ಬಾಣಂತಿ, ಗರ್ಭಿಣಿಯರ ಬಗ್ಗೆ ಮಾಹಿತಿ ಒದಗಿಸುವದು ಸೇರಿದಂತೆ ಅನೇಕ ಕೆಲಸಗಳಿಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ನೀಡಲಾಗಿತ್ತು. ಕೊಪ್ಪಳ ಜಿಲ್ಲೆಯ 1,850 ಕಾರ್ಯಕರ್ತೆಯರು ಸೇರಿ ರಾಜ್ಯದ 65 ಸಾವಿರ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯಡಿ 2018-19 ರಲ್ಲಿ ಮೊಬೈಲ್ ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!