ಉದಯವಾಹಿನಿ, ಕಾರವಾರ: ಆರೋಗ್ಯ ಸರಿ ಇರಲಿಲ್ಲ, ಅನಾರೋಗ್ಯದ ಕಾರಣ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಆಗಲಿಲ್ಲ ಎಂದು ಯಲ್ಲಾಪುರದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ ನೀಡಿದ್ದಾರೆ. ನಾನು ನಾಲ್ಕು ದಶಕದಿಂದ ರಾಜಕಾರಣದಲ್ಲಿ ಇದ್ದೇನೆ. ನಾನು ಯಾರಿಗೂ ಹೆದರಿ ಮತದಾನಕ್ಕೆ ಹೋಗಿಲ್ಲ. ನಾನು ಮತದಾನಕ್ಕೆ ಹೋಗಿ ಅಡ್ಡ ಮತದಾನ ಮಾಡಬಹುದಿತ್ತು.

ಇಲ್ಲವೇ ಮತದಾನ ಮಾಡದೆಯೇ ಇರಬಹುದಿತ್ತು. ನಾನು ಯಾರಿಗೂ ವಾರ್ನಿಂಗ್ ಕೊಡಲು ಹೋಗಿಲ್ಲ. ನನಗೆ ನನ್ನದೇ ಆದ ಅಸಮಾಧಾನ ಇರುವುದು ನಿಜ. ಅದು ಜಿಲ್ಲಾಮಟ್ಟದಲ್ಲಿ ಮಾತ್ರ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯದ ಮುಖಂಡರ ಮೇಲೆ ಅಸಮಾಧಾನ ಇಲ್ಲ. ಸಮಸ್ಯೆ ಇರುವುದು ಜಿಲ್ಲಾ ಮಟ್ಟದ ನಾಯಕರಿಂದ ಮಾತ್ರ. ಯಾರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದಕ್ಕೆ ಕಾಲವೇ ಉತ್ತರ ಕೊಡಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!