ಉದಯವಾಹಿನಿ, ಶಿಡ್ಲಘಟ್ಟ: ಕಾರ್ಮಿಕ ವೃತ್ತಿಇಲ್ಲದೆ ನಕಲಿ ದಾಖಲೆ ನೀಡಿ ಕಾರ್ಮಿಕ ಕಾರ್ಡ್ ಪಡೆದಿರುವ ಕಾರಣ ದಿನ ಕೂಲಿ ಮಾಡುವ ಅರ್ಹ ಫಲಾನುಭವಿಗಳು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅಂತಹ ನಕಲಿ ಕಾರ್ಡ್ ಪಡೆದಿರುವವರು ತಮ್ಮ ಕಾರ್ಡ್ ಹಿಂತಿರುಗಿಸಿ ನೋಂದಣಿಯನ್ನು ರದ್ದು ಪಡಿಸಬೇಕು ಎಂದು ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ ತಿಳಿಸಿದರು.
ನಗರದ ಕಾರ್ಮಿಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಕಟ್ಟಡ ಕಾರ್ಮಿಕರ ಜೀವನ ಸುಧಾರಿಸಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಅಂತಹ ಯೋಜನೆಗಳ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ನಕಲಿ ಗುರುತಿನ ಚೀಟಿ ಪಡೆದಿದ್ದಾರೆ ಅಂತಹವರಿಗೆ ಹೆಚ್ಚರಿಕೆ ನೀಡಿದರು. ತಾಲ್ಲೂಕಿನ ಕಾರ್ಮಿಕ ಇಲಾಖೆಯಲ್ಲಿ ನಕಲಿ ದಾಖಲೆ ನೀಡಿ ನೋಂದಣಿಯಾಗುವ ಮೂಲಕ ಕಾರ್ಮಿಕ ಕಾರ್ಡ್ ಪಡೆದ ನೂರಾರು ನಕಲಿ ಕಾರ್ಡ್ ಇರುವುದು ಕಂಡುಬರುತ್ತದೆ ನಾವು ಪತ್ತೆ ಹಚ್ಚುವ ಮೊದಲು ತಂದು ಕಛೇರಿಯಲ್ಲಿ ವಾಪಸ್ ಮಾಡಿ ಇಲ್ಲವಾದಲ್ಲಿ ದಂಡ ತೆತ್ತಬೇಕಾಗುತ್ತದೆ, ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯು ಕಾರ್ಮಿಕರ ಸೌಲಭ್ಯಗಳು ಮತ್ತು ನಕಲಿ ಕಾರ್ಡ್‌ಗಳ ಬಗ್ಗೆ ಧ್ವನಿವರ್ಧಕದ ಮೂಲಕ ಕಾರ್ಮಿಕರಿಗೆ ಅರಿವು ಮೂಡಿಸಲಾಗುತ್ತಿದೆ, ಕಟ್ಟಡ ಕಾರ್ಮಿಕರಲ್ಲದವರು ತಮ್ಮ ಬಳಿ ಇರುವ ಕಾರ್ಡ್‌ಗಳನ್ನು ಕಡ್ಡಾಯವಾಗಿ ಕಚೇರಿಗೆ ಬಂದು ಹಿಂತಿರುಗಿಸಬೇಕು ಎಂದರು.

 

Leave a Reply

Your email address will not be published. Required fields are marked *

error: Content is protected !!