ಉದಯವಾಹಿನಿ, ಚನ್ನಪಟ್ಟಣ : ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಮುನಿಯಪ್ಪನದೊಡ್ಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ತಿಮ್ಮರಾಜು ಎಸ್, ಆಯ್ಕೆಯಾಗಿರುತ್ತಾರೆ.
ತಾಲ್ಲೂಕು ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ರಂಗನಾಥ ಜಿ.ಕೆ, ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುಧಾ ವೈ.ಕೆ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವಣ್ಣ, ಹಾಗೂ ಸದಸ್ಯರುಗಳು ಪೋಷಕ ವರ್ಗದವರು, ಶಾಲೆಯ ಶಿಕ್ಷಕರುಗಳಾದ ಉಮಾ ಎಸ್, ಶಿವರಾಮಯ್ಯ ಆರ್.ಎಸ್, ಹರೀಶ್ ಎಸ್, ಉಮಾದೇವಿ ಆರ್, ನಾಗರಾಜು, ಪ್ರಕಾಶ್ ಆರ್.ಟಿ, ಅಭಿನಂದಿಸಿದ್ದಾರೆ.
