ಉದಯವಾಹಿನಿ, ಧಾರವಾಡ : ಅವತಾರ ಪುರಷ ಎಂದರೆ ಒಂದು ಪ್ರದೇಶಕ್ಕೆ ಸೀಮಿತ ಇರುವುದಿಲ್ಲ. ಎಲ್ಲ ಧರ್ಮಗಳ ಮೂಲತತ್ವ ಒಂದೇ. ಅವುಗಳು ಕಾಲ ಕಾಲಕ್ಕೆ ಮಾರ್ಪಾಡಾಗಿ ಜೀವನಕ್ರಮದಲ್ಲಿ ಬದಲಾಗುತ್ತಾ ಹೋಗಬಹುದು. ಪ್ರತಿ ಮಾನವದೇವರನ್ನು ಪ್ರೀತಿಸಿ ಐಕ್ಯವಾಗುವುದು ಜೀವನದ ಗುರಿ.ಅದರಲ್ಲಿಯೇ ಮೋಕ್ಷ ಇದೆ ಎಂದು ಬೆಂಗಳೂರಿನ ಮೆಹರಬಾಬಾ ವಿಶ್ವಆಧ್ಯಾತ್ಮಿಕ ಕೇಂದ್ರದ ಶ್ರೀಮತಿ ನರ್ಮದಾ ನಾಗೇಶ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಅವತಾರ ಮೆಹರ ಬಾಬಾರವರದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಮೆಹರ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ‘ಅವತಾರ ಮಹರಬಾಬಾರವರ ಆಧ್ಯಾತ್ಮಿಕ ಜೀವನ ಹಾಗೂ ಸಾಮಾಜಿ ಕೊಡುಗೆ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಸಾಧು, ಸಂತರು, ಮುನಿಗಳು, ಸೂಫಿಗಳು ಎಲ್ಲರು ಮಾನವ ಕುಲಕ್ಕೆ ಆಧ್ಯಾತ್ಮದ ಮೂಲಕ ಒಳ್ಳೆಯದನ್ನೇ ಬಯಸಿದವರು. ಮೆಹರಬಾಬಾ ಒಬ್ಬ ಅವತಾರ ಪುರುಷರಾಗಿ ಅಧ್ಯಾತ್ಮದ ಮೂಲಕ ತಮ್ಮದೇ ಆದಂತಹ ಕೊಡುಗೆಯನ್ನು ಸಮಾಜಕ್ಕೆ ನೀಡಿದ ಮಹಾನ್ ಸಂತ.ದೀನರು, ಬಡವರು, ರೋಗಿಗಳಿಗೆ ಸಾಕ್ಷಾತ್ ತಾಯಿಯ ರೂಪದಲ್ಲಿ ಜಾತಿ, ಮತ, ಪಂಥಎನ್ನದೇ ಸೇವೆಗೈದ ಮೆಹರಬಾಬಾ ಮೇರು ವ್ಯಕ್ತಿತ್ವದ ಅವತಾರ ಪುರುಷರಾಗಿ ನಿಲ್ಲುತ್ತಾರೆ ಎಂದರು.
ಕವಿ, ಸಾಹಿತಿ, ಆಧ್ಯಾತ್ಮಿಕಚಿಂತಕ ಎ.ಎ. ದರ್ಗಾ ಮೆಹರಬಾಬಾ ಪ್ರಶಸ್ತಿ ಸ್ವೀಕರಿಸಿ, ಮಾತನಾಡುತ್ತಾ, ಶ್ರೇಷ್ಠ ದಾರ್ಶನಿಕರಾದ ಮೆಹರಬಾಬಾರವರ ಮಾನವೀಯ ಮೌಲ್ಯಗಳು ನಮಗೆಲ್ಲಾಅನುಕರಣೀಯ.ಸಮಾಜದಲ್ಲಿಇಂದುಜಾತಿ, ಮತ, ಪಂಥ ಎಂಬ ಭೇದಗಳನ್ನು ಧಿಕ್ಕರಿಸಿ ಸೌಹಾರ್ಧಯುತವಾಗಿ ಸಾಮರಸ್ಯದಿಂದ ನಾವೆಲ್ಲಾ ಬಾಳಬೇಕು.ಮೆಹರಬಾಬಾಅವರ ಹೆಸರಿನ ‘ಮೆಹರ ಪುರಸ್ಕಾರ’ ನನಗೆ ದೊರೆತಿದ್ದು ನನ್ನ ಪುಣ್ಯ.ಇದಕ್ಕಾಗಿಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನನ್ನ ಕೃತಜ್ಞತೆಗಳು ಎಂದರು.
ಧಾರವಾಡ ನಾರಾಯಣಪುರ ಲೈನ್ಸ್ ಸ್ಕೂಲ್‍ನ ಪ್ರಾಂಶುಪಾಲೆ ಶ್ರೀಮತಿ ಶಶಿಕಲಾ ಹೆಬ್ಳಿಕರ್ ಉಪಸ್ಥಿತರಿದ್ದು ಮಾತನಾಡುತ್ತಾ, ಮೆಹರ ಬಾಬಾರ ಸಾಮಾಜಿಕ ಕಳಕಳಿಯ ಕುರಿತು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಧಾರವಾಡ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಮಾನವಕುಲಕ್ಕೆ ಶ್ರೇಯಸ್ಸನ್ನು ಬಯಸಿದ ಸಾಧು, ಸಂತರಲ್ಲಿ ಮೆಹರಬಾಬಾಅವರೂಕೂಡಒಬ್ಬರು.ಮೇರು ವ್ಯಕ್ತಿತ್ವದಕರುಣಾಮಯಿಯಾಗಿದ್ದಇವರು ಸದಾ ಸ್ಮರಣೀಯರುಎಂದರು.
ದತ್ತಿದಾನಿ ಯು.ಎಸ್. ಕುನ್ನಿಭಾವಿ ದತ್ತಿಆಶಯಕುರಿತು ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿಅವತಾರ ಮೆಹರಬಾಬಾರವರಕುರಿತುರಘುಪತಿರಾವ್, ಅಧ್ಯಕ್ಷರು, ಮೆಹರಬಾಬಾ ವಿಶ್ವಆಧ್ಯಾತ್ಮಿಕಕೇಂದ್ರ, ಬೆಂಗಳೂರು ಅವರಿಂದ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ಸತೀಶತುರಮರಿ ಸ್ವಾಗತಿಸಿದರು.ಶಿವಾನಂದ ಭಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿಕಾರ್ಯಕ್ರಮ ನಿರ್ವಹಿಸಿದರು.ಸರಸ್ವತಿ ಪೂಜಾರ ವಂದಿಸಿದರು.
ಕಾರ್ಯಕ್ರಮದಲ್ಲಿ ವೀರಣ್ಣ ಬಡಿಗೇರ, ಡಾ.ಎಚ್.ಬಿ. ನೀಲಗುಂದ, ಆರತಿ ದೇವಶಿಖಾಮಣಿ, ಸಂತೋಷ ಭಾವಿಕಟ್ಟಿ, ಡಾ.ಕುಸುಮಾ ಜವಳಿ, ಶಿವಾನಂದ ಹೂಗಾರ, ವಿಜಯಲಕ್ಷ್ಮಿ ವಾಲಿ, ಮಂದಾಕಿನಿ ಪುರೋಹಿತ, ಶ್ರೀಮತಿ ದರ್ಗಾ, ಶರಣಪ್ಪ ಮೆಣಸಿನಕಾಯಿ, ಪೀರಜಾದೆ, ಅಶೋಕ ಬಾಬರ ಸೇರಿದಂತೆ ಮೆಹರಬಾಬಾ ಅನುಯಾಯಿಗಳು ಉಪಸ್ಥಿತರಿದ್ದರು.
