
ಉದಯವಾಹಿನಿ ದೇವನಹಳ್ಳಿ: ಎಸ್.ಎಲ್.ಎನ್.ಎಸ್ ಭಾರತ್ ಗ್ಯಾಸ್ ಕಚೇರಿಯಲ್ಲಿ ಎನ್ ಸಿ ಮತ್ತು ಡಿ.ಬಿ.ಸಿ ಉತ್ಸವದ -2022 ಬಹುಮಾನ ವಿತರಣೆ ಕಾರ್ಯಕ್ರಮ ನೆಡೆಯಿತು.ಪಟ್ಟಣದ ಶಾಂತಿನಗರದ ಎಸ್.ಎಲ್.ಎನ್.ಎಸ್ ಭಾರತ್ ಗ್ಯಾಸ್ ಮುಖ್ಯ ಕಚೇರಿಯಲ್ಲಿ ಲಕ್ಕಿ ಡ್ರಾ ನಡೆಸಿದ್ದು ಅದರಲ್ಲಿ ವಿಜೇತರಾದ ಗ್ರಾಹಕರಿಗೆ ಬಹುಮಾನ ನೀಡಲಾಯಿತು ಹಾಗೂ ಕಚೇರಿಯಲ್ಲಿ ಕೆಲಸ ಮಾಡುವ ನೌಕರರಿಗೆ ಅವರ ಕಾರ್ಯವೈಖರಿ ಬಗ್ಗೆ ಮಾಹಿತಿ ತಿಳಿಸಿ ನಂತರ ಮುಖ್ಯ ಕಚೇರಿಯಿಂದ ಆಗಮಿಸಿದ್ದ ಅತಿಥಿಗಳು ಬಹುಮಾನ ವಿತರಿಸಿದರು.ಬಹುಮಾನ ವಿತರಿಸಿ ಮಾತನಾಡಿದ ಭಾರತ್ ಗ್ಯಾಸ್ ನ ಟಿ.ಎಂ ಜಾವೆದ್ ದೇಸಾಯ್ ಗ್ರಾಹಕರು ಪೆಟ್ರೋಲಿಯಂ ಉತ್ನನ್ನಗಳಾದ ಗ್ರಾಸ್ ನ್ನು ಜಾಗರೂಕತೆಯಿಂದ ಬಳಸಬೇಕು ಉಪಯೋಗಿಸಿದ ನಂತರ ಗ್ಯಾಸ್ ಸಿಲಿಂಡರ್ ರೆಗ್ಯುಲೇಟರ್ ಆಫ್ ಮಾಡಬೇಕು ಹಾಗೂ ಮುಂಜಾನೆಯ ಗಡಿಬಿಡಿ ಸಮಯದಲ್ಲಿ ಗ್ಯಾಸ್ ಬಗ್ಗೆ ಎಚ್ಚರದಿಂದ ಉಪಯೋಗಿಸಬೇಕು ಮತ್ತು ಗಾಳಿ ಆಡುವ ಕಿಟಕಿಯನ್ನು ತೆರೆದಿರಬೇಕು ಗ್ರಾಹಕರು ತಮಗೆ ಗ್ಯಾಸ್ ವಿಚಾರವಾಗಿ ಏನೇ ತೊಂದರೆಯಾದರೂ ಟೋಲ್ ಫ್ರೀ ಸಂಖ್ಯೆ 1906 ಕರೆ ಮಾಡಿ ತಕ್ಷಣವೇ ಸ್ಪಂದಿಸುತ್ತಾರೆ ಅನಿಲವನ್ನು ಮಿತವಾಗಿ ಬಳಸಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಭಾರತ್ ಗ್ಯಾಸ್ ನ ಅಧಿಕಾರಿಗಳಾದ ಅನಿಕೇತ್ ಬಾಬು, ಆಶಿಶ್ ರಂಜನ್, ಎಸ್.ಎಲ್.ಎನ್ ಎಸ್ ಏಜೆನ್ಸಿ ವಿತರಕ ಶ್ರೇಯಸ್, ಬಿ.ಜೆ.ಪಿ. ಮುಖಂಡ ಎ.ಕೆ.ಪಿ ನಾಗೇಶ್, ವ್ಯವಸ್ಥಾಪಕ ವೇಣುಗೋಪಾಲ್, ಸಿಬ್ಬಂದಿ ವರ್ಗ ಇದ್ದರು. ಗ್ಯಾಸ್ ಸೋರಿಕೆಯಾದ ತಕ್ಷಣ ಟೋಲ್ ಫ್ರೀ ನಂಬರ್ 1906 ಕರೆಮಾಡಿ.