
ಉದಯವಾಹಿನಿ,ಕೋಲಾರ: ಜಿಲ್ಲೆಯ ಲೀನಾ ಎಲ್ ಐ ಸಿ ಪ್ರತಿನಿಧಿಗಳ ಒಂದು ದಿನದ ಧರಣಿಯನ್ನು ಕೋಲಾರ ಶಾಖೆಯ ಮುಂದೆ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಲೀನಾ ಅಧ್ಯಕ್ಷರಾದ ಬಿ.ರವಿಪ್ರಕಾಶ್ ಮಾತನಾಡಿ ನಮ್ಮ ಬೇಡಿಕೆಗಳಾದ ಎಲ್ ಐ ಸಿ ಕಂಪನಿ ವತಿಯಿಂದ ಆನ್ಲೈನ್ ಮುಖಾಂತರ ಪಾಲಿಸಿ ಮಾರಾಟ ಮಾಡುವುದು ಮತ್ತು ರಿಯಾಯಿತಿ ಕೊಡುವುದನ್ನ ಈ ತಕ್ಷಣ ನಿಲ್ಲಿಸಬೇಕು. ಡೈರೆಕ್ಟ್ ಮಾರ್ಕೆಟಿಂಗ್ ನಿಂದ ನೇರವಾಗಿ ನಮ್ಮಗಳ ಪಾಲಿಸಿದಾರರನ್ನ ಸಂಪರ್ಕ ಮಾಡುವುದನ್ನ ನಿಲ್ಲಿಸಿ. ಗ್ರಾಚ್ಯುಟಿಯನ್ನ 10 ಲಕ್ಷದವರೆಗೆ ಹೆಚ್ಚಿಸಬೇಕು. ಎಲ್ಲಾ ಪ್ರತಿನಿಧಿಗಳಿಗೆ ಮತ್ತು ಕ್ಲಬ್ ಮೆಂಬರ್ ಗಳಿಗೆ ಗ್ರೂಪ್ ಇನ್ಶೂರೆನ್ಸ್ ಹೆಚ್ಚಿಸಬೇಕು. ಪಾಲಿಸಿದಾರರಿಗೆ ಕೊಡುವ ಬೋನಸ್ಸನ್ನ ಹೆಚ್ಚಿಸಬೇಕು. ಎಲ್ಲಾ ವಿಮೆಯ ಹಣಕಾಸು ವ್ಯವಹಾರದ ಮೇಲೆ ಹಾಕುತ್ತಿರುವ ಬಡ್ಡಿಯನ್ನ ಕಡಿಮೆ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಟಿ.ವಿ.ಮಲ್ಲಿಕಾರ್ಜುನ, ಖಜಾಂಚಿ ಎನ್.ವಿಶ್ವನಾಥ್, ಪ್ರತಿನಿಧಿಗಳಾದ ವೆಂಕಟೆಗೌಡ , ರಾಜಕುಮಾರ, ದೇವೇಗೌಡ, ಮುನಿರಾಜ.ಎಂ, ಕೃಷ್ಣಪ್ಪ, ಪ್ರೇಮ, ಮಂಜುನಾಥ್, ಹನುಮಪ್ಪ ಇತರರು ಉಪಸ್ಥಿತರಿದ್ದರು.