
ಉದಯವಾಹಿನಿ,ದೇವದುರ್ಗ : ಏಮ್ಸ್ ಹೋರಾಟ ಸಮಿತಿ ರಾಯಚೂರ್ ಜಿಲ್ಲಾ ಸಮಿತಿ ಮತ್ತು ದೇವದುರ್ಗ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅಂಚೆ ಪತ್ರ ಚಳುವಳಿಗೆ ದೇವದುರ್ಗ ತಾಲೂಕ ಸವಿತಾ ಸಮಾಜ ವತಿಯಿಂದ ಈ ಪತ್ರ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿ ಸವಿತಾ ಸಮಾಜದ ಬಂಧುಗಳು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಇವರಿಗೆ ಪತ್ರದ ಮುಖಾಂತರ ಮನವಿ ಸಲ್ಲಿಸಿದರುಈ ಪತ್ರ ಚಳುವಳಿಗೆ ಬೆಂಬಲ ನೀಡಿದ ದೇವದುರ್ಗ ತಾಲೂಕ ಸವಿತಾ ಸಮಾಜದ ಅಧ್ಯಕ್ಷರಾದ ಗೋಳಪ್ಪ ಹೇಮನೂರ್ ಮಾತನಾಡಿ ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದರ ನಮ್ಮ ರಾಯಚೂರ ಜಿಲ್ಲೆಗೆ ಪದೇಪದೇ ಅನ್ಯಾಯವಾಗುತ್ತಿದೆ ಈ ಭಾಗವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದೆ ಹಿಂದೆಯೂ ಕೂಡ ಐಐಟಿಯನ್ನು ಧಾರವಾಡ ಜಿಲ್ಲೆಗೆ ಮಂಜೂರಿ ಮಾಡಿಸಿ ನಮ್ಮ ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ ಸರ್ಕಾರ ಈಗಲೂ ಕೂಡ ಎಚ್ಚರಗೊಂಡು ರಾಯಚೂರ ಜಿಲ್ಲೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಏಮ್ಸ್ ಅನ್ನು ಮಂಜೂರಿ ಮಾಡಬೇಕೆಂದು ತಮಗೆ ಈ ಪತ್ರ ಚಳುವಳಿ ಮುಖಾಂತರ ನಾವು ವಿನಂತಿಸಿಕೊಳ್ಳುತ್ತೇವೆ ಸರ್ಕಾರ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲ ಜಿಲ್ಲೆಯಲ್ಲ ಶಾಸಕರು ಸಂಸದರು ಹೋರಾಟಗಾರರ ಬೇಡಿಕೆಗಳ ಬಗ್ಗೆ ಗಮನ ಹರಿಸಿ ಸ್ಪಂದನೆ ನೀಡಬೇಕೆಂದರು.