ಉದಯವಾಹಿನಿ, ಆನೇಕಲ್ : ನೇತ್ರದಾನ, ಅಂಗಾಂಗದಾನ ಮಾಡಿದರೆ ಬೇರೆಯವರಿಗೆ ಜೀವ ಕೊಟ್ಟಂಗೆ ಆಗುತ್ತದೆ ಆದರೆ ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿಗೆ ಕೊಟ್ಟರೆ ಇಡೀ ದೇಶದಲ್ಲಿಯೇ ನಂದಾ ದೀಪ ಬೆಳಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ|| ಮಂಜುನಾಥ್ ರವರು ತಿಳಿಸಿದರು.
ಅವರು ನೆರಳೂರು ಗ್ರಾಮದಲ್ಲಿ ನಡೆದ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪ್ರದಾನಿ ಮೋದಿರವರನ್ನು ಮೂರನೇ ಬಾರಿಗೆ ದೇಶದ ಪ್ರದಾನಿಯನ್ನಾಗಿ ಮಾಡಲು ಬಿಜೆಪಿಗೆ ಮತ ನೀಡುವ ಮೂಲಕ ನಾವೆಲ್ಲರೂ ಸಾಕ್ಷಿಯಾಗಬೇಕಿದೆ ಎಂದರು, ಮೋದಿರವರು ಪ್ರದಾನಿಯಾದ ಮೇಲೆ ಬಾರತ ಅಭಿವೃದ್ದಿ ಸಾಗುತ್ತಿದೆ ಶಾಶ್ವತವಾದ ಯೋಜನೆಗಳು ಮಾಡುತ್ತಿದ್ದಾರೆ ಉದಾಹರಣೆಗೆ ರಾಷ್ಠೀಯ ಹೆದ್ದಾರಿಗಳು ಅಭಿವೃದ್ದಿ, ರೈಲ್ವೆ ಅಭಿವೃದ್ದಿ. ರೈತರ, ಮಹಿಳೆಯರ ಪಗತಿಗೆ ಹೆಚ್ಚು ಉತ್ತೇಜನ ಸೇರಿದಂತೆ ಅನೇಕ ಶಾಶ್ವತ ಕಾರ್ಯಕ್ರಮಗಳನ್ನು ಪ್ರದಾನಿ ಮೋದಿರವರು ಕೈಗೊಂಡಿದ್ದಾರೆ ಎಂದರು. ವಿಶೇಷವಾಗಿ ನೆರಳೂರು ಗ್ರಾಮ ಅಯ್ಯೋಧ್ಯೆ ನೀರ್ಮಾಣಕ್ಕೆ ಹೆಚ್ಚು ಕಾಣಿಕೆಯನ್ನು ಕೊಟ್ಟ ಗ್ರಾಮವಾಗಿದೆ ಎಂದರು. ಟೀಕೆಗಳು ಸಾಯುತ್ತದೆ ಸಾಧನೆಗಳು ಬೆಳಗುತ್ತದೆ, ನಾನು ರಾಜಕೀಯಕ್ಕೆ ಬಂದಿರುವುದು ಸೇವೆ ಮಾಡುವುದಕ್ಕೆ ಆನೇಕಲ್ ತಾಲ್ಲೂಕಿನಲ್ಲಿರುವ ಕಾರ್ಯಕರ್ತರಲ್ಲಿರುವ ಹುಮ್ಮಸ್ಸು ನೋಡಿದರೆ ನನ್ನ ಗೆಲುವಿಗೆ ಆನೆ ಬಲ ಬಂದತಾಗಿದೆ ಎಂದು ತಿಳಿಸಿದರು. ಕಾರ್ಯಕರ್ತರು ಜನರನ್ನು ಜಾಗೃತ ಗೊಳಿಸಿ ಹೆಚ್ಚು ಹೆಚ್ಚು ಬಿಜೆಪಿಗೆ ಮತ ನೀಡುವಂತೆ ಪ್ರೇರೇಪಣೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅತ್ತಿಬೆಲೆ ಬಿಜೆಪಿ ಮಂಡಲದ ಅಧ್ಯಕ್ಷರಾದ ಬಿಬಿಐ ರಾಜು, ಆನೇಕಲ್ ಮಂಡಲದ ಅಧ್ಯಕ್ಷ ನಾಯನಹಳ್ಳಿ ಮುನಿರಾಜುಗೌಡ, ನೆರಳೂರು ಗ್ರಾಮ ಪಂಚಾಯಿತಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ನೆರಳೂರು ಸತೀಶ್, ಬಿಜೆಪಿ ಮುಖಂಡರಾದ ಗುಡ್ಡಹಟ್ಟಿ ನಾಗೇಶ್ ರೆಡ್ಡಿ,ನೆರಳೂರು ಮಲ್ಲಿಕಾರ್ಜುನ್, ಶ್ರೀಫಾಲ್, ರಾಕೇಶ್, ಎನ್.ಎಸ್.ಪ್ರಭು, ನೆರಳೂರು ಶಶಿಕುಮಾರ್, ಹರೀಶ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!