ಉದಯವಾಹಿನಿ, ಕೋಲಾರ : ಕೇಂದ್ರದ ಕೋಮುವಾದಿ ಹಾಗೂ ಭ್ರಷ್ಟಚಾರ ಸರ್ಕಾರದ ವಿರುದ್ದ ಕಾಂಗ್ರೇಸ್ ಚುನಾವಣೆಯಾಗಿದೆ. ಭಾರತವು ಶಾಂತಿ ಸೌರ್ಹಾದತೆಯ ಸರ್ವಜನಾಂಗೀಯ ಶಾಂತಿಯ ತೋಟವಾಗಿ ಉಳಿಸಿ ಕೊಳ್ಳಲು ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿರುವುದು ನಮ್ಮಗಳ ಜವಾಬ್ದಾರಿಯಾಗಿದೆ. ಎಂದು ರಾಜ್ಯ ನಗರಾಭಿವೃದ್ದಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಕರೆ ನೀಡಿದರು.
ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಕಾಂಗ್ರೇಸ್ ಪಕ್ಷದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿ ಕಳೆದ ಎರಡು ಅವಧಿ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರವು ಜನತೆಗೆ ಏನೇನು ಆಶ್ವಾಸನೆ ನೀಡಿತ್ತು ಅದು ಯಾವೂಂದು ಈಡೇರಸದ ಬಿಜೆಪಿ ಪಕ್ಷವು ಸುಳ್ಳುಗಳ ಫ್ಯಾಕ್ಟರಿಯಾಗಿದೆಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು,
ಜೆ.ಡಿ.ಎಸ್. ಪಕ್ಷವು ಬಿಜೆಪಿ ಪಕ್ಷದ ಬಿ ಟೀಮ್ ಎಂದು ಈ ಹಿಂದೆಯೇ ತಿಳಿಸಿದ್ದನ್ನು ಈ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ರುಜುವಾತು ಮಾಡಿದೆ. ದೇಶವನ್ನು ವಿಭಜಿಸಲು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿ ಕೊಂಡಿರುವುದು, ಕೋಮುವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿ ಕೊಂಡು ಜಾತ್ಯಾತೀತ ಪಕ್ಷವೆಂದು ಹೇಳಿ ಕೊಳ್ಳುವಂತ ನೈತಿಕತೆ ಕಳೆದು ಕೊಂಡಿದೆ ಎಂದು ಟೀಕಿಸಿದರು,
ಕೋಲಾರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿತ್ತು ೧೫೦೦ ಪಾತಳ ಹೊಕ್ಕರೂ ನೀರು ಸಿಗುತ್ತಿರಲಿಲ್ಲ.ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ಕೆ.ಸಿ.ವ್ಯಾಲಿ ನೀರು ಹಾಗೂ ಯರ್‌ಗೋಳ್ ನೀರು ಹರಿಸಿದ ನಂತರ ಇಂದು ಅಂತರ್ಜಲ ಅಭಿವೃದ್ದಿಗೊಂಡಿದೆ. ೩೦೦-೪೦೦ ಅಡಿಗಳಿಗೆ ನೀರು ಸಿಗುತ್ತಿದ್ದು ನೀರಿನ ಭವಣೆ ನೀಗಿಸಿದೆ ಇಂದು ಬೆಂಗಳೂರಿನಲ್ಲೂ ನೀರಿನ ಅಭಾವ ವ್ಯಾಪಿಸಿರುವುದು ನಿಮಗೊ ತಿಳಿದಿದೆ. ಮುಂದಿನ ದಿನಗಳಲ್ಲಿ ಎತ್ತಿನ ಹೊಳೆ ಯೋಜನೆಯನ್ನು ಪೂರ್ಣ ಗೊಳಿಸಲು ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸ ಬೇಕಾಗಿದೆ ಎಂದರು,
ಕಾಂಗ್ರೇಸ್ ಪಕ್ಷವು ಕೊಟ್ಟ ಮಾತಿನಂತೆ ೫ ಗ್ಯಾರೆಂಟಿಗಳನ್ನು ಅನುಷ್ಠನಕ್ಕೆ ತರುವ ಮೂಲಕ ನುಡಿದಂತೆ ನಡೆಯುವ ಪಕ್ಷವೆಂದು ಸಾಭೀತು ಪಡೆಸಿದೆ. ಈಗಾಗಲೇ ೧೨೫ ಕೋಟಿ ಫಲಾನುಭವಿಗಳನ್ನು ಗುರುತಿಸಿದ್ದು ೬೭ ಸಾವಿರ ಕೋಟಿ ಗ್ಯಾರೆಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದು ಈಗಾಗಲೇ ೩೭ ಸಾವಿರ ಕೋಟಿ ರೂ ಗ್ಯಾರೆಂಟಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು,
