ಉದಯವಾಹಿನಿ, ಬೆಂಗಳೂರು : ಏಕಾಏಕಿ ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿರುವ ನಗರದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರ ಪೈಕಿ ಒಬ್ಬ ವಿದ್ಯಾರ್ಥಿನಿಗೆ ಕಾಲರಾ ಇರುವುದು ಪತ್ತೆಯಾಗಿದೆ. 47 ವಿದ್ಯಾರ್ಥಿನಿಯರಲ್ಲಿ 26 ವರ್ಷದ ಪ್ರಫುಲ್ಲ ಎಂಬ ವಿದ್ಯಾರ್ಥಿನಿಯ ಬ್ಲಡ್ ಸ್ಯಾಂಪಲ್ ನಲ್ಲಿ ಪಾಸಿಟಿವ್ ಬಂದಿರುವುದರಿಂದ ಅವರಿಗೆ ಕಾಲರಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದ 46 ವಿದ್ಯಾರ್ಥಿನಿಯ ರಕ್ತ ಪರೀಕ್ಷೆ ವರದಿ ಇಂದು ಬರಲಿದೆ.
ಕಳೆದ ರಾತ್ರಿ ಕಾಲೇಜಿನ ಹಾಸ್ಟಲ್‍ನಲ್ಲಿ ಏಕಾ ಏಕಿ ವಿದ್ಯಾರ್ಥಿನೀಯರು ವಾಂತಿ ಮಾಡಿಕೊಡು ತೀವ್ರ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಕೂಡಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಅದರಲ್ಲಿ 28 ವಿದ್ಯಾರ್ಥಿನಿಯರಿಗೆ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಐವರಿಗೆ ಹೆಚ್ ಬ್ಲಾಕ್ ಹಾಗೂ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಉತ್ತಮವಾಗಿದೆ ಎಂದು ಬಿಎಂಸಿಆರ್‍ಐ ಮುಖ್ಯಸ್ಥ ಮತ್ತು ನಿರ್ದೇಶಕ ಡಾ.ರಮೇಶ್ ಕೃಷ್ಣ ತಿಳಿಸಿದ್ದಾರೆ.
ವಿದ್ಯಾರ್ಥಿನಿಯರು ಅಸ್ವಸ್ಥಗೊಳ್ಳಲು ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಾಗುತ್ತಿದೆ. ಹೆಚ್ಚು ತಾಪಮಾನ ನಡುವೆ ಬೆಂಗಳೂರಿನಲ್ಲಿ ಕಾಲರಾ ಭೀತಿ ಶುರುವಾಗಿದೆ. ಇದರಿಂದ ಆರೋಗ್ಯ ಇಲಾಖೆಗೆ ಚಿಂತೆ ಶುರುವಾಗಿದೆ.ಹೀಗಾಗಿ ಎಲ್ಲಾ ವಿದ್ಯಾರ್ಥಿನಿಯರ ಮಾದರಿಯನ್ನು ಕಲ್ಚರ್ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಹಾಸ್ಟೆಲ್ ನ ನೀರನ್ನ ಪರಿಶೀಲಿಸಲು ಸೂಚನೆ ನೀಡಿದೆ ಇದರ ಜತೆಗೆ ನೀರಿನ ಪರೀಕ್ಷೆ ಮಾಡಿಸಲು ತೀರ್ಮಾನಿಸಿದೆ. ವಿಕ್ಟೋರಿಯಾ ಆಸ್ಪತ್ರೆಯ ಐಸಿಯು ದಾಖಲಾಗಿರುವ ವಿದ್ಯಾರ್ಥಿನಿಯರು ಬಿಟ್ಟು ಉಳಿದವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ವಿದ್ಯಾರ್ಥಿನಿಯರ ಹಾಸ್ಟೆಲಲ್ಲಿ ಕಾಲರಾ ಕಾಣಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹಾಸ್ಟೆಲ್ ಒಳಗೆ ಯಾರೊಬ್ಬರನ್ನೂ ಬಿಡಲಾಗುತ್ತಿಲ್ಲ;
