ಉದಯವಾಹಿನಿ, ಬಳ್ಳಾರಿ, : ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆ ಅತ್ಯಗತ್ಯ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಕ್ರಿಕೆಟ್ ಇಂದು ಹೆಚ್ಚು ಜನಪ್ರಿಯ ಆಟ ಆದರೂ ಕೂಡ ಅಮೇರಿಕಾ, ರಷ್ಯಾ, ಚೀನಾ, ಜರ್ಮನಿ, ಪ್ರಾನ್ಸ್, ಜಪಾನ್ ಮುಂತಾದ ದೇಶಗಳು ಇಂದಿಗೂ ಹೆಚ್ಚು ಇಷ್ಟ ಪಡಲ್ಲ.ಆ ದೇಶದ ತಂಡಗಳು ವಿಶ್ವ ಕಪ್ ಕ್ರಿಕೆಟ್ನಲ್ಲಿ ಭಾಗವಹಿಸುವುದಿಲ್ಲ.ಕಾರಣ ಹೆಚ್ಚು ಸಮಯ ಕಳೆಯಬೇಕಾಗುತ್ತದೆ ಎಂದು.
ಅದಕ್ಕಾಗಿಯೇ ವಿದ್ಯಾರ್ಥಿಗಳು ಕ್ರಿಕೆಟ್ ಜೊತೆಗೆ ದೇಶಿಯ ಆಟಗಳಾದ ಹಾಕಿ, ಕಬಡ್ಡಿಗಳಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು.ಪ್ರತಿದಿನ ಓಟ,ಧ್ಯಾನ, ಯೋಗ ಹಾಗೂ ವಾಕಿಂಗ್ ಮಾಡಬೇಕೆಂದು ಹೇಳಿದರು.
ವಿಜೇತ ವಿದ್ಯಾರ್ಥಿಗಳಾದ ಕುರುಬರ ಹರೀಶ, ಎನ್. ಪ್ರದೀಪ್ ಕುಮಾರ್, ಕೆ.ಸಂದೀಪ್, ಕೆ.ಕಾರ್ತಿಕ್, ವಿರುಪಾಕ್ಷಿ ಹಾಗೂ ಜೀವನ್ ಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ವಿ.ಬಸವರಾಜ, ಕೆ.ಸುಮತಿ, ಕನ್ನಡ ಶಿಕ್ಷಕಿ ಶ್ವೇತಾ, ಇಂಗ್ಲೀಷ್ ಶಿಕ್ಷಕರಾದ ಸಿ.ಉಮ್ಮೆಹಾನಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಮಹೇಶ್, ಕೆ.ಗೀತಾ, ಅನುಷ್ಕಾ ಮುಂತಾದವರು ಉಪಸ್ಥಿತರಿದ್ದರು.
