ಉದಯವಾಹಿನಿ, ಸಂಡೂರು: ಇಡೀ ದೇಶದಲ್ಲಿ ರಕ್ಷಣೆಗಾಗಿ ದೇಶವನ್ನು ಕಟ್ಟಲು ನೂತನ ಪಕ್ಷವಾಗಿ ಜನಸಂಘವನ್ನು ಸಂಘಟಿಸಿ ಬಿಜೆಪಿ ಪಕ್ಷವನ್ನು ಕಟ್ಟಿದಂತಹ ಕೀರ್ತಿ ಅಡ್ವಾಣಿ, ವಾಜಪೇಯಿಯವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಅಧ್ಯಕ್ಷ ನಾನಾನ ನಿಕ್ಕಂ ತಿಳಿಸಿದರು.
ಅವರು ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ 45ನೇ ವರ್ಷದ ದಿನಾಚರಣೆ ಉದ್ದೇಶಿಸಿ ಮಾತನಾಡಿ ಪಕ್ಷದ ಧ್ವಜಾರೋಹಣವನ್ನು ನೆರವೇರಿಸಲಾಯಿತು ನಂತರ ಬೆಳಿಗ್ಗೆ:10:30ರಿಂದ ಮಧ್ಯಾಹ್ನ 1:30ರವರೆಗೆ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಬಿಜೆಪಿಯ ಕಾರ್ಯಕರ್ತರು ಪಾದ ಯಾತ್ರೆಯನ್ನು ಸಂಡೂರು ಮಂಡಲ ಕಛೇರಿಯಿಂದ ಪ್ರಾರಂಭ ಮಾಡಿ ಬಳ್ಳಾರಿ ರಸ್ತೆಯ ಮೂಲಕ ವಿಜಯ ವೃತ್ತ, ಪುರಸಭೆ ಬಸ್ ನಿಲ್ದಾಣ, ನೂರಾನಿ ಮಸೀದಿ ರಸ್ತೆಯ ಮೂಲಕ ಕೆ.ಇ.ಬಿ.ವೃತ್ತದಿಂದ ಶ್ರೀವಾಲ್ಮೀಕಿ ವೃತ್ತದ ಮೂಲಕ ವಿಜಯ ವೃತ್ತದಲ್ಲಿ ಬಿಜೆಪಿ ಪಕ್ಷದ ಪ್ರಮುಖರ ಭಾಷಣ ಮಾಡುವ ಮೂಲಕ ಕಾರ್ಯಕ್ರಮ ಮುಕ್ತಾಯ ಮಾಡಿದ್ದು ಎಲ್ಲರೂ ಭಾಗಿಯಾಗಿದ್ದು ಬಹು ಮುಖ್ಯವಾಗಿ ಮೋದಿಯವರ, ಹೋರಾಟಗಾರರ ಕನಸ್ಸನ್ನು ನನಸು ಮಾಡಿ ದೇಶವನ್ನು ಕಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದ ಉಸ್ತುವಾರಿಗಳಾದ ವಿ ಕೆ ಬಸಪ್ಪ, ಪ್ರಧಾನ ಕಾರ್ಯದರ್ಶಿಗಳಾದ ರಘುನಾಥ್ ಆರ್ ಟಿ, ಪ್ರವೀಣ್ ಕುಮಾರ್, ಮಂಡಲದ ಉಪಾಧ್ಯಕ್ಷರುಗಳಾದ ಯರಿಸ್ವಾಮಿ ಕರಡಿ, ನರಸಿಂಹ, ಈಶ್ವರ್ ಒಡೆಯರ್, ಪ್ರಭುಗೌಡರು, ಶ್ರೀಮತಿ ಪುಷ್ಪ, ಕಾರ್ಗಿಲ್ ಬಸವನಗೌಡರು, ಮಹಿಳಾ ಮೋರ್ಚಾದ ಅಧ್ಯಕ್ಷರು ದೀಪಾ ಘೋಡ್ಕೆ ಕಾರ್ಯಾಲಯ ಕಾರ್ಯದರ್ಶಿ ದರೋಜಿ ರಮೇಶ್, ಕಿನ್ನೂರೇಶ್ವರ್, ವಿಶ್ವನಾಥ್ ರೆಡ್ಡಿ, ಪುರುಷೋತ್ತಮ , ವೀರೇಶ್ ಗೌಡ ಸಂಡೂರು ಪುರಸಭೆ ಸದಸ್ಯರುಗಳು, ಎಲ್ಲಾ ಚುನಾಯಿತ ಪ್ರತಿನಿಧಿಗಳು, ಬಿಜೆಪಿ ಮಂಡಲದ ಪದಾಧಿಕಾರಿಗಳು ಹಾಗೂ ಎಲ್ಲಾ ಮೋರ್ಚಾಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಹಿರಿಯ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
