ಉದಯವಾಹಿನಿ, ಬೆಂಗಳೂರು: ಪ್ರಣಾಳಿಕೆಗಳಲ್ಲಿ ಪರಿಸರ ಸಂರಕ್ಷಣೆಗೆ ಒತ್ತು ನೀಡುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಪರಿಸರಕ್ಕಾಗಿ ನಾವು ಕಾರ್ಯಕರ್ತರಿಂದ ನಡೆದ ಪರಿಸರ ಪ್ರಣಾಳಿಕೆಗೆ ಬೆಂಗಳೂರು ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪರಿಸರವಾದಿಗಳು, ರಾಜಕೀಯ ಪಕ್ಷಗಳ ನಾಯಕರುಗಳ ಪರಿಸರ ಕಡೆಗಣನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸಮಾವೇಶದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಪರಿಸರ ಸಂರಕ್ಷಣೆ ಕುರಿತು ಸಿದ್ದಮಾಡಿದ ಪ್ರಣಾಳಿಕೆಯನ್ನು ಎಲ್ಲಾ ಪಕ್ಷದ ವರಿಷ್ಠರು ಸ್ವೀಕರಿಸಿದರು. ಪರಿಸರವಾದಿಗಳಾದ ನಾಗೇಶ್ ಹೆಗಡೆ, ವೆಂಕಟೇಶ್ ಮೂರ್ತಿ, ಪರಿಸರ ಮಂಜು, ಆಂಜನೇಯ ರೆಡ್ಡಿ, ಗಂಡಸಿ ಸದಾನಂದಸ್ವಾಮಿ, ಶೇಖರ್ ಗೌಳೇರ್, ಪರಶುರಾಮಗೌಡ, ಶೋಭ ಮಹೇಶ್ ಬಸಾಪುರ ಮತ್ತಿತರರು ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.ಈ ಸಮಾವೇಶದಲ್ಲಿ ಪರಿಸರವಾದಿಗಳು ಸೇರಿದಂತೆ ಅನೇಕ ಶಾಲಾಕಾಲೇಜು ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು.
