ಉದಯವಾಹಿನಿ, ಕಲಬುರಗಿ: ಏ.11, ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶನಿವಾರ ದಿನಾಂಕ 13 ಏಪ್ರಿಲ 2024 ರಂದು ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಶಿವಪ್ರಭು ಮಹಾರಾಜರ ಪುಣ್ಯ ಸ್ಮರಣೋತ್ಸವದ ಚೈತ್ರ ಸಪ್ತಾಹವು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ. ವೀಣಾ ಹಾಗೂ ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಗಿ ರವಿವಾರ ದಿನಾಂಕ 21 ಎಪ್ರಿಲ್ 2024 ರಂದು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಳ್ಳುವದು ಒಂಬತ್ತು ದಿನಗಳ ಪಯರ್ಂತ ಜರುಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ವಿವಿಧೆಡೆಯಿಂದ ಆಗಮಿಸಿದ ಮಹಾತ್ಮ ರಿಂದ ಪುರಾಣ ಪ್ರವಚನ ಹಾಗೂ ಶ್ರೀ ಸಮರ್ಥ ರಾಮದಾಸ ಮಹಾರಾಜರ ದಾಸಬೋದ ಪಠಣ ಜಾಗರಣೆ ನಿಮಿತ್ಯ ಅನುಭವ ಪದಗಳು. ಕಾಲಜ್ಞಾನ ಪದಗಳು. ಶರಣ ಶರಣೇಯರಿಂದ ಭಜನೆ ಕಾರ್ಯಕ್ರಮ ಜರಗುವವು. ಬುಧವಾರ ದಿನಾಂಕ 17 ಏಪ್ರಿಲ 2024 ರಂದು ಬೆಳಿಗ್ಗೆ 11=00 ಗಂಟೆಗೆ ಶ್ರೀ ರಾಮಚಂದ್ರ ದೇವರ ಜನ್ಮೋತ್ಸವ ಅಂಗವಾಗಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರಗುವದು.
