ಉದಯವಾಹಿನಿ, ಬಳ್ಳಾರಿ : ತಲತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವಂತಹ ರೈತರು ಸಾಗುವಳಿ ಚೀಟಿ ನೀಡಲು ಒತ್ತಾಯಿಸಿ ಕುರುಗೋಡು ತಹಶೀಲ್ದಾರರ ಕಚೇರಿ ಆವರಣದಲ್ಲಿ ನೆಡೆಸುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಇಂದಿಗೆ 141 ನೇ ದಿನಕ್ಕೆ ಕಾಲಿಟ್ಟಿರುವುದು ತಮ್ಮೆಲ್ಲರಿಗೂ ತಿಳಿದಿರುವಂತಹ ವಿಷಯವೇ
ಕಳೆದ 5 ತಿಂಗಳಲ್ಲಿ ಕಂದಾಯ ಮಂತ್ರಿಗಳು,ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಎಲ್ಲರಿಗೂ ನಮ್ಮ ಹೋರಾಟದ ಸವಿವರವಾದ ಮನವಿಯನ್ನು ಸಲ್ಲಿಸಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ ಮಾಡಿಕೊಂಡರೂ ಕೂಡ ಯಾರೂ ಕೂಡ ಸ್ಪಂದಿಸುವುದಿಲ್ಲ ಹಾಗಾಗಿ ಬೇಸತ್ತು ನಾವು ಚುನಾವಣೆ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದೇವೆ
ಪ್ರಜಾಪ್ರಭುತ್ವದಲ್ಲಿ ನ್ಯಾಯಯುತವಾಗಿ ಕಳೆದ 5 ತಿಂಗಳಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ ಸರ್ಕಾರ ಇಂದು ನಮ್ಮ ಬೇಡಿಕೆ ಈಡೇರಿಸಬಹುದು, ನಾಳೆ ಬಗೇಹರಿಸಬಹುದು,ಎಂದು ಮೂರು ತಲೆಮಾರುಗಳ ಕಾಲ ಕಾದು ಕಾದು ಸಾಕಾಗಿದೆ ಆದರೆ ಜನಪ್ರತಿನಿಧಿಗಳಾಗಲಿ ಸರ್ಕಾರವಾಗಲೀ ನಮ್ಮ ಕಷ್ಟವನ್ನು ಕೇಳಿಸುತ್ತಿಲ್ಲ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಾದ ನಮಗೆ ನ್ಯಾಯ ಸಿಗಲಿಲ್ಲ ಎಂದಮೇಲೆ ನಾವು ಯಾವ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಏನು ಪ್ರಯೋಜನ ಆದ ಕಾರಣ ನಾವು 204 ಕುಟುಂಬಗಳೂ ಈ ದಿನ ಒಂದು ತೀರ್ಮಾನ ಮಾಡಿದೀವಿ ನಮ್ಮ ಕುಟುಂಬ ನಮ್ಮ ಸಂಬಂಧಿಕರು ಯಾರೂ ಕೂಡ ಮೇ 7 ರಂದು ನೆಡೆಯುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವುದಿಲ್ಲ ಮಾಡಬಾರದು ಚುನಾವಣೆ ಬಹಿಷ್ಕರಿಸಬೇಕು ಎಂದು ನಮ್ಮೆಲ್ಲಾ ಸಂಬಂದಿಕರಿಗೂ ಹೇಳುತ್ತೇವೆ ಎಂದು ಪತ್ರಿಕಾ ಮತ್ತು ಮಾಧ್ಯಮ ಗೆಳೆಯರ ಮುಖಾಂತರ ಸರ್ಕಾರದ ಗಮನಕ್ಕೆ ತರಬಯಸುತ್ತೇವೆ ಎಂದು ಕಾರ್ಯದರ್ಶಿ ಗಾಳಿ ಬಸವರಾಜ್ ತಿಳಿಸಿದ್ದಾರೆ.
