ಉದಯವಾಹಿನಿ, ಮಾಲೂರು : ಕನ್ನಡ ಚಲನಚಿತ್ರ ಮೇರು ನಟ ದಿ.ಡಾ ರಾಜಕುಮಾರ್ ಅವರ ೧೮ ನೆ.ಪುಣ್ಯ ಸ್ಮರಣೆಯ ಕಾರ್ಯಕ್ರಮದ ಆಂಗವಾಗಿ ಪಟ್ಟಣದ ಪುರಸಭೆ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಸ್ಮರಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ದೊಡ್ಡಶಿವಾರ ನಾರಾಯಣಸ್ವಾಮಿ ಮಾತನಾಡಿ, ಕನ್ನಡ ಚಲನಚಿತ್ರ ಮೇರು ನಟ ದಿವಂಗತ ಡಾ ರಾಜ್ ಜೀವನದಲ್ಲಿ ನಡೆದು ಬಂದ ಹಾದಿ ಮತ್ತು ಚಿತ್ರರಂಗದಲ್ಲಿ ಅವರು ಕನ್ನಡ ಚಿತ್ರಕ್ಕೆ ನೀಡಿರುವ ಕೊಡುಗೆಯ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ಕನ್ನಡ ಸೇನೆಯ ತಾಲೂಕು ಅಧ್ಯಕ್ಷರಾದ ಎಸ್.ಎಂರಾಜು, ಕ.ರ.ವೇ.ದಯಾನಂದ, ಆಟೋ ಶ್ರೀನಿವಾಸ್, ಸಿ.ವಿ.ಚಲಪತಿ. ಐರನ್ ಅಮರ್, ಬಿ.ಎಂ.ಮಂಜುನಾಥ್, ಚನ್ನಕೃಷ್ಣಪ್ಪ, ಅಂಜಿ ಕನ್ನಡಿಗ, ಇತರರು ಪಾಲ್ಗೊಂಡಿದ್ದರು.
