ಉದಯವಾಹಿನಿ, ಚಿತ್ರದುರ್ಗ: ಬಿಸಿಲಿನ ಶಾಖದ ತೀವ್ರತೆಯು ತುಂಬಾ ಹೆಚ್ಚಿರುವ ಸಮಯವಾಗಿದೆ ಇದರಿಂದ ಹೊರ ಬರಲು ಎಲ್ಲಾ ಜನರು ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳ ಹಿಂದೆ ಹೋಗುತ್ತಿದ್ದಾರೆ ಆದರೆ ಇವು ನಮ್ಮ ದೇಹದ ಶಾಖ ಮತ್ತು ಬಾಯಾರಿಕೆಯಿಂದ ತಾತ್ಕಾಲಿಕ ಪರಿಹಾರವಾಗಬಹುದು ಇವುಗಳಿಂದ ದೇಹಕ್ಕೆ ತುಂಬಾ ಹಾನಿಕಾರಕವಾಗಿದವೆ. ಇದರ ಬದಲಾಗಿ ಆಯುಷ್ ಇಲಾಖೆಯು ಮನೆಯಲ್ಲೇ ಎಲ್ಲರೂ ಸುಲಭವಾಗಿ ತಯಾರಿಸಬಹುದಾದ ಚಿಂಚಾ ಪಾನಕ (ಹುಣಸೆಹಣ್ಣಿನ ಪಾನಕ) ಪರಿಚಯಿಸುತ್ತಿದೆ ನಮ್ಮ ಆಯುಷ್ ಪದ್ಧತಿಯಲ್ಲಿ ಬೇಸಿಗೆಯ ಪಾನೀಯಗಳ ಬಗ್ಗೆ ಅನೇಕ ಉಲ್ಲೇಖಗಳಿವೆ, ಅವು ಬಾಯಾರಿಕೆಯನ್ನು ಕಡಿಮೆ ಮಾಡುವುದರ ಜೊತೆಗೆ ದೇಹದ ಆರೋಗ್ಯವನ್ನೂ ಸುಧಾರಿಸುತ್ತದೆ ಅಂತಹ ಒಂದು ಪಾನೀಯಗಳಲ್ಲಿ ಚಿಂಚಾ ಪಾನಕವೂ ಇದನ್ನು ತಮ್ಮ ಮನೆಗಳಲ್ಲಿ ತಯಾರಿಸಿಕೊಂಡು ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಿ ‘ ಎಂದು ಚಿತ್ರದುರ್ಗ ಆಯುಷ್ ಇಲಾಖೆಯ ಜಿಲ್ಲಾ ಆಡಳಿತಾಧಿಕಾರಿ ಡಾ. ಚಂದ್ರಕಾಂತ ನಾಗಚಂದ್ರ ತಿಳಿಸಿದರು.
ಜಿಲ್ಲಾಡಳಿತ ಚಿತ್ರದುರ್ಗ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತಿ, ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ, ಜಿಲ್ಲಾ ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಶುಕ್ರವಾರ ಮತದಾನ ಜಾಗೃತಿಯ ಅಂಗವಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಚಿಂಚಾ ಪಾನಕವನ್ನು ವಿತರಿಸಿ ಮಾತನಾಡಿದರು.
ಚಿಂಚೂ ಪಾನಕದ ಲಾಭಗಳು ಮತ್ತು ಅದನ್ನು ತಯಾರಿಸುವ ವಿಧನಾವನ್ನು ತಿಳಿಸಿಕೊಡುತ್ತಾ ಮಾತನಾಡಿದ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಶಿವಕುಮಾರ್ ಚಿಂಚಾ ಪಾನಕ ಅಂದರೆ ಹುಣಸೆ ಹಣ್ಣಿನ ಪಾನಕ ಎಂದರ್ಥ. ಇದರಿಂದ ಬಾಯಾರಿಕೆ ಕಡಿಮೆಯಾಗುವ ಜೊತೆಗೆ ದೇಹದಲ್ಲಿನ ಉಷ್ಣತೆ ಕಡಿಮೆಗೊಳಿಸಿ ಜೀರ್ಣಕ್ರಿಯೆ ಹೆಚ್ಚಿಸಿ ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ಮಲಬದ್ದತೆ ತಗ್ಗಲಿದೆ.
ಇದನ್ನು ತಯಾಸುವುದು ತಂಬಾ ಸುಲಭವಾಗಿದ್ದು ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದಲ್ಲಿ ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಸ್ವಚ್ಛ ಕೈಗಳಿಂದ ಕಿವುಚಿ ಶೇಕರಿಸಿಟ್ಟು ಅದಕ್ಕೆ ನಿರ್ದಿಷ್ಟ ಪ್ರಮಾಣದಬೆಲ್ಲದ ಪುಡಿ, ಜೀರಿಗೆ ಪುಡಿ, ಕಾಳುಮೆಣಸು, ಮತ್ತು ಸೈಂಧವ ಲವಣವನ್ನು ಬೆರೆಸಿ ಒಮ್ಮೆ 50 ರಿಂದ 100ಮಿಲಿಯಷ್ಟು ಮಾತ್ರ ಸೇವಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಮತದಾನ ಜಾಗೃತಿಯ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಇದೇ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಜಿಲ್ಲೆಯ ಎಲ್ಲ ಮತದಾರರು ತಪ್ಪದೇ ತಮ್ಮ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಹೇಳಿದರು.
ಮ್ಯಾರಥಾನ್ ಓಟದ ಸ್ಪರ್ಧೆಯು ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಿಂದ ಪ್ರಾರಂಭವಾಗಿ ಪಾರ್ಕ್ ರೋಡ್, ಜೋಗಿಮಟ್ಟಿ ರಸ್ತೆ, ರಂಗಯ್ಯನಬಾಗಿಲು, ಉಚ್ಚಂಗಿ ಯಲ್ಲಮ್ಮ ದೇವಸ್ಥಾನ, ಆನೆ ಬಾಗಿಲು, ಮಹಾತ್ಮ ಗಾಂಧಿ ವೃತ್ತ, ಬಿ.ಡಿ. ವೃತ್ತ, ಪ್ರವಾಸಿ ಮಂದಿರ ಮಾರ್ಗವಾಗಿ ಮದಕರಿ ವೃತ್ತ, ಎಲ್‍ಐಸಿ ಮುಂಭಾಗ, ಸ್ಟೇಡಿಯಂ ರಸ್ತೆ ಮೂಲಕ ಒನಕೆ ಓಬವ್ವ ಕ್ರೀಡಾಂಗಣದವರೆಗೆ ನಡೆಯಿತು.
ಮ್ಯಾರಥಾನ್ ಮುಕ್ತಾಯ ಹಂತವಾದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮ್ಯಾರಥಾನ್ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳಾ ವಿಭಾಗದಲ್ಲಿ ಆರು ಜನರಿಗೆ ಹಾಗೂ ಪುರುಷರ ವಿಭಾಗದಲ್ಲಿ ಆರು ಜನರಿಗೆ ಬಹುಮಾನ, ಪ್ರಶಸ್ತಿ ವಿತರಿಸಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ,ಸ್ವಿಪ್ ಸಮಿತಿ ಜಿಲ್ಲಾ ಸಂಯೋಜಕಿ ಸುಷ್ಮಾ ರಾಣಿ ಆಯುಷ್ ಯೋಗ ತರಬೇತುದಾರ ರವಿ ಕೆ. ಅಂಬೇಕರ್ ವೈದ್ಯಾಧಿಕಾರಿಗಳಾದ ಡಾ.ಜಗಧೀಶ , ಡಾ.ಮಠದ್ ಡಾ.ವಿಜಯಲಕ್ಷ್ಮಿ ಡಾ.ಉಮೇಶ್ ರೆಡ್ಡಿ, ಡಾ.ಉದಯಭಾಸ್ಕರ್ ಡಾ.ಪ್ರಶಾಂತ್ ಡಾ.ರೇಷ್ಮಾ ಡಾ.ನಾಗರಾಜ್ ನಾಯ್ಕ್ ಸೇರಿದಂತೆ ಜಿಲ್ಲೆಯ ಕ್ರೀಡಾಪಟುಗಳು, ಯುವಕ-ಯುವತಿಯರು, ಸ್ವಯಂ ಸೇವಾ ಸಂಸ್ಥೆಯ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.
