ಉದಯವಾಹಿನಿ, ಕಲಬುರಗಿ: ನಗರದ ಸೇಡಂ ರಸ್ತೆಯ ಸುಮನ ಹೋಟೆಲ್ ಹತ್ತಿರ ಬೈಕ್‍ಗೆ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಸಾಫ್ಟವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟಿದ್ದಾರೆ.
ಮೃತನನ್ನು ರೇವಣಕುಮಾರ ಬಸಣ್ಣಾ ಸೊಂತ (29) ಎಂದು ಗುರುತಿಸಲಾಗಿದೆ.
ಹೈದ್ರಾಬಾದ್‍ನ ಕಂಪನಿಯೊಂದರಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ರೇವಣಕುಮಾರ ಕಲಬುರಗಿಯಲ್ಲಿಯೇ ಇದ್ದು ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಲಿದ್ದರು. ಮೇ.21 ರಂದು ರಾತ್ರಿ ಸೇಡಂ ರಸ್ತೆಯಲ್ಲಿರುವ ಹೋಟೆಲ್‍ನಲ್ಲಿ ಗೆಳೆಯರೊಂದಿಗೆ ಊಟ ಮಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದರು ಎಂದು ತಿಳಿದುಬಂದಿದೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!