ಉದಯವಾಹಿನಿ, ವಿಜಯಪುರ: ಬಸ್ ಹತ್ತುವ ವೇಳೆ ಮಹಿಳೆ ಕಾಲಿನ ಮೇಲೆ ಬಸ್ ಹಾಯ್ದು ಗಾಯಗೊಂಡ ಘಟನೆವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಸಾವಿತ್ರಿಬಾಯಿ ಬಿರಾದಾರ (40) ಎಂಬ ಮಹಿಳೆಯ ಕಾಲಿಗೆ ತೀವ್ರ ಪೆಟ್ಟಾಗಿದೆ.
ಬಸ್ ಹತ್ತುವ ವೇಳೆ ಆಯತಪ್ಪಿ ಬಿದ್ದ ಸಾವಿತ್ರಿಬಾಯಿ ಕಾಲಿನ ಮೇಲೆ ಬಸ್ ಚಕ್ರ ಹರಿದ ಪರಿಣಾಮ ಈ ಅವಘಡ ಸಂಭವಿಸಿದೆ.
ವಿಜಯಪುರದಿಂದ ಇಂಡಿಗೆ ತೆರಳುವ ಬಸ್ ಹತ್ತುವ ವೇಳೆ ಈ ಘಟನೆ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಯಿತು.
ವಿಜಯಪುರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
