ಉದಯವಾಹಿನಿ, ಬೆಂಗಳೂರು: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ, ಮೂರು ಪಕ್ಷಗಳಲ್ಲೂ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿದೆ. ಇದರ ನಡುವೆ ಬಿಜೆಪಿ ನಾಯಕರ ಕೈಗೆ ಚುನಾವಣೆಯ ಆಂತರಿಕ ಫಲಿತಾಂಶದ ವರದಿ ಸಿಕ್ಕಿದ್ದು, ಕಮಲ ಪಾಳಯದಲ್ಲಿ ಒಂದಿಷ್ಟು ಆತಂಕ ಎದ್ದು ಕಾಣುತ್ತಿದೆ.
28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಕನಸು ಇಟ್ಟುಕೊಂಡಿದ್ದ ಕಮಲ-ದಳ ನಾಯಕರಿಗೆ ಆಂತರಿಕ ವರದಿ ಕೊಂಚ ನೆಮದಿ ಕೆಡುವಂತೆ ಮಾಡಿದೆ. ಅಂದರೆ, ಬಿಜೆಪಿಯೇ ರಾಜ್ಯದ ಬೂತ್‌ ಮಟ್ಟದ ಹಂತದಿಂದ ನಡೆಸಿರುವ ಆಂತರಿಕ ವರದಿಯನ್ನು ನೋಡಿದ ಮೇಲೆ ರಾಜ್ಯದ ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದು ಅಸಾಧ್ಯ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ.
ಬಿಜೆಪಿಯ ಬೂತ್‌, ಜಿಲ್ಲಾ, ತಾಲ್ಲೂಕು ಹಾಗೂ ಮುಖಂಡರ, ಕಾರ್ಯಕರ್ತರ ಅಭಿಪ್ರಾಯಗಳನ್ನು ಒಳಗೊಂಡಿರುವ ಆಂತರಿಕ ವರದಿಯೂ ಬಿಜೆಪಿ ನಾಯಕರಿಗೆ ಆಘಾತಕಾರಿ ಸುದ್ದಿ ಕೊಟ್ಟಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದ್ದ ಬಿಜೆಪಿಯೂ ಈ ಬಾರಿ ಹಲವು ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಬಿಜೆಪಿಯೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌‍ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದರೂ ಟಾರ್ಗೆಟ್‌ ಹಾಕಿಕೊಂಡಿತ್ತು. ಆದರೆ, ಆಂತರಿಕ ವರದಿ ಬಿಜೆಪಿ ನಾಯಕರ ಕೈ ಸೇರಿದೆ.
ಲೋಕಸಭಾ ಚುನಾವಣೆಯಲ್ಲಿ ್ಲ ಜೆಡಿಎಸ್‌‍ ಜೊತೆಗಿನ ಮೈತ್ರಿ ಸಕ್ಸಸ್‌‍ ಆಗಿದ್ದರೂ ಕೂಡ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಎಡವುವ ಸಾಧ್ಯತೆ ಇದೆ ಎಂದು ಆಂತರಿಕ ವರದಿ ಹೇಳಿದೆ ಎನ್ನಲಾಗುತ್ತಿದೆ.ಆಂತರಿಕ ವರದಿಯ ಪ್ರಕಾರ, ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌‍ಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಕಮಲ ಪಡೆಯ ನಾಯಕರು ಇದ್ದಾರೆ. ಆದರೆ, ಅವರು ಅಂದುಕೊಂಡ ಗುರಿ ಮುಟ್ಟುವುದು ಇರಲಿ, ಕಳೆದ ಬಾರಿ ಪಡೆದ ಸ್ಥಾನಗಳನ್ನು ಪಡೆಯುವುದು ಅನುಮಾನ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!