ಉದಯವಾಹಿನಿ, ಕೋಲಾರ: ವಿಧಾನಸಭೆ ಯಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಎಂ.ಎಲ್.ಸಿ. ಸ್ಥಾನ ನನಗೆ ಅವಕಾಶ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಅದು ಕಾಂಗ್ರೇಸ್ ಹೈಕಮಾಂಡ್ ತೆಗೆದು ಕೊಳ್ಳುವ ತೀರ್ಮಾನವಾಗಿದೆ.
ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರವನ್ನು ಬಿಟ್ಟು ಕೊಡುವ ಸಂದರ್ಭದಲ್ಲಿ ನನಗೆ ಆಶ್ವಾಸನೆ ಕೊಟ್ಟಿರುವುದನ್ನು ಅವರು ಮರೆತಿಲ್ಲ. ಇತ್ತೀಚೆಗೆ ಅವರನ್ನು ಭೇಟಿಯಾದ ಸಂದರ್ಭದಲ್ಲಿ ತಾವು ನೀಡಿದ್ದ ನೆನಪಿಸಿ ಕೊಂಡರು ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ತಿಳಿಸಿದರು,
ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡುತ್ತಾ ಸಿದ್ದರಾಮಯ್ಯ ಸೇರಿದಂತೆ ಹಲವು ಪಕ್ಷದ ವರಿಷ್ಟರು, ನನಗೆ ಸೊಕ್ತವಾದ ಸ್ಥಾನ ಮಾನ ಕಲ್ಪಿಸುವುದಾಗಿ ಹೇಳಿದ್ದರು ಅದು ಯಾವೂದು, ಏನು, ಎಂಬುವುದರ ಬಗ್ಗೆ ನಾವು ಆಗಾ ಯಾವೂದೇ ರೀತಿ ಮಾತುಕತೆ ನಡೆಸಲಿಲ್ಲ. ಯಾವೂದೇ ಕರಾರುಗಳು ಮಾಡಿ ಕೊಂಡಿರಲಿಲ್ಲ. ಏಕೆಂದರೆ ನನಗೆ ನೀಡುವ ಸ್ಥಾನ ಮಾನಕ್ಕಿಂತ ಕೋಲಾರದಿಂದ ಎರಡನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾದರೆ ಕ್ಷೇತ್ರವನ್ನು ಅಭಿವೃದ್ದಿ ಪಡೆಸ ಬಹುದಾಗಿದೆ ಎಂಬ ದೆಸೆಯಲ್ಲಿ ನಾನು ಕ್ಷೇತ್ರವನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟು ಕೊಡಲು ಮುಂದಾಗಿದ್ದೆ ಎಂದು ಹೇಳಿದರು,
ಮೊನ್ನೆ ಜಿಲ್ಲಾ ಕಾಂಗ್ರೇಸ್ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮತ್ತು ಇತರೆ ಹಲವು ಮುಖಂಡರು ನಮ್ಮ ಮನೆಗೆ ಬಂದು ಕ್ರಿಪ್ಕೋ ನಿರ್ದೇಶನಾಗಿ ೭ ನೇ ಬಾರಿ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಿ, ವಿಧಾನ ಪರಿಷತ್ ಸ್ಥಾನ ನೀಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಶಿಫಾರಸ್ಸ್ ಮಾಡುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಲ್ಲದೆ. ಮುಖ್ಯ ಮಂತ್ರಿಯವರನ್ನು ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪ ಅವರೊಂದಿಗೆ ನಿಯೋಗವು ಬೇಟಿಯಾಗಿ ನನಗೆ ಎಂ.ಎಲ್.ಸಿ. ಸ್ಥಾನಕ್ಕೆ ಮನವಿ ಮಾಡಿದ್ದಾರೆ ಎಂದರು.
