ಉದಯವಾಹಿನಿ, ರಾಯಚೂರು:  ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಭಾರಿ ಬಿರುಗಾಳಿಗೆ ಮರಗಳು ನೆಲಕ್ಕುರುಳಿವೆ.
ಕೆಲವು ಕಡೆ ವಿದ್ಯುತ್‌ ಕಂಬಗಳು ಉರುಳಿ ಬಿದ್ದರೆ, ಕೆಲವಡೆ ಬಾಗಿಕೊಂಡು ವಿದ್ಯುತ್ ತಂತಿ ತುಂಡಾಗಿದೆ.
ಅನೇಕ ಕಡೆ ಭಾನುವಾರ ರಾತ್ರಿಯಿಂದ ಸೋಮವಾರ ಮಧ್ಯಾಹ್ನದವರೆಗೂ ವಿದ್ಯುತ್‌ ಸಂಪರ್ಕ ಕಡಿತಕೊಂಡಿತ್ತು.ಜೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಮರು ಸ್ಥಾಪಿಸಲು ಪ್ರಯಾಸ ಪಡಬೇಕಾಯಿತು.ವಾಣಿಜ್ಯ ಮಳಿಗೆಗಳು, ಹೋಟೆಲ್‌, ರೆಸ್ಟೋರೆಂಟ್ ಹಾಗೂ ಟಿಫನ್‌ ಸೆಂಟರ್‌ಗಳ ಮಾಲೀಕರು ತೊಂದರೆ ಅನುಭವಿಸಿದರು. ಧಗೆ ಜನರನ್ನು ಬೆಂಬಿಡದಂತೆ ಕಾಡಿತು.ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾದಲ್ಲಿ 45.5 ಮಿ.ಮೀ ಅಡವಿಹಾಳ 42.5 ಮಿ.ಮೀ ಲಿಂಗಸುಗೂರು 44 ಮಿ.ಮೀ ಉಪ್ಪಾರನಂದಿಹಾಳ 40 ಮಿ.ಮೀ ಗೌಡೂರು 32.5 ಮಿ.ಮೀ ಸಿಂಧನೂರು ತಾಲ್ಲೂಕಿನ ಗುಂಜನಹಳ್ಳಿ 38 ಮಿ.ಮೀ ಉಮಲೂಟಿ 38.5 ಮಿ.ಮೀ ರಾಯಚೂರು ತಾಲ್ಲೂಕಿನ ಯರಗೇರಾ 35.5 ಮಿ.ಮೀ ದೇವದುರ್ಗ ತಾಲ್ಲೂಕಿನ ಗಲಗ 25.1 ಮಿ.ಮೀ ದೇವದುರ್ಗ ಗಬ್ಬೂರು 16 ಮಿ.ಮೀ ಅರಕೇರಾ 9.8 ಮಿ.ಮೀ ಹಾಗೂ ಜಾಲಹಳ್ಳಿಯಲ್ಲಿ 18 ಮಿ.ಮೀ. ಮಳೆಯಾಗಿದೆ. ರಾಯಚೂರು ನಗರದ ಹೊರವಲಯದಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ.

Leave a Reply

Your email address will not be published. Required fields are marked *

error: Content is protected !!