ಉದಯವಾಹಿನಿ, ಬೆಂಗಳೂರು : ಪ್ರಜ್ವಲ್ಗೇ ಖಿನ್ನತೆ ಆಗಿದ್ರೆ ಸಂತ್ರಸ್ತೆಯರ ಪರಿಸ್ಥಿತಿ ಏನು..? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಇತ್ತೀಚೆಗೆ ಪ್ರಜ್ವಲ್ ವೀಡಿಯೋ ಮೂಲಕ ಹೇಳಿರುವುದನ್ನು ನೋಡುತ್ತಿದ್ರೆ ನನಗೆ ಶಾಕ್ ಆಗುತ್ತಿದೆ.
ಬಿಜೆಪಿಯವರೇ ವಿಡಿಯೋ ಮಾಡಿ ಹೊರಗೆ ಬಾ ಅಂದಿರಬೇಕು. ಇದೆಲ್ಲವೂ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ ಅಂತ ಅನಿಸುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.
ದೇಶದ ಎಲ್ಲಾ ರಾಜಕಾರಣಿಗಳು ಪ್ರಜ್ವಲ್ ಬಗ್ಗೆ ಮಾತಾಡಿದ್ದಾರೆ, ಅವರೆಲ್ಲರನ್ನೂ ಬಿಟ್ಟು ಕೇವಲ ರಾಹುಲ್ ಗಾಂಧಿ ಬಗ್ಗೆ ಯಾಕೆ ಮಾತಾಡ್ತಿದ್ದೀರಿ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!