ಉದಯವಾಹಿನಿ, ಬೆಂಗಳೂರು: ರಸ್ತೆ ಬದಿ ಅನುಮಾನಾಸ್ಪದವಾಗಿ ಕಂಡು ಬಂದ ಬ್ಯಾಗ್‌ನಿಂದ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು.ಇತ್ತೀಚಿನ ದಿನಗಳಲ್ಲಿ ಬಾಂಬ್‌ ಬೆದರಿಕೆ ಸಂದೇಶಗಳು ಬರುತ್ತಿರುವುದರಿಂದ ಯಾವುದೇ ಜಾಗದಲ್ಲಿ ಏನಾದರೂ ಅನುಮಾನಾಸ್ಪದ ವಸ್ತು ಕಂಡು ಬಂದರೆ ಸಾರ್ವಜನಿಕರು ಗಾಬರಿಪಡುವಂತಾಗಿದೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ರಾಮಮೂರ್ತಿ ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯ ್ಲೖೆಓವರ್‌ ಬಳಿ ಕಪ್ಪು ಬಣ್ಣದ ಬ್ಯಾಗ್‌ ಇರುವುದು ಕಂಡು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು.ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬ್ಯಾಗ್‌ ಪರಿಶೀಲಿಸಿದಾಗ ಅದರಲ್ಲಿ ಮಹಿಳೆಯ ಬಟ್ಟೆಗಳು, ಪಾನಿಪುರಿ ಇರುವುದು ಕಂಡು ನಿಟ್ಟುಸಿರು ಬಿಟ್ಟರು.
ಬಹುಶಃ ಯಾರೋ ಮಹಿಳೆ ರಸ್ತೆ ಬದಿ ಬ್ಯಾಗ್‌‍ ಇಟ್ಟು ಸಮೀಪದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ಹೋಗಿರಬಹುದೆಂದು ತಿಳಿದು ಪೊಲೀಸರು ನಿರಾಳರಾದರು. ನಿನ್ನೆಯಷ್ಟೇ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ಸಿಬ್ಬಂದಿ ಕಚೇರಿ ಸ್ಫೋಟಿಸುವುದಾಗಿ ಶೌಚಾಲಯದ ಕನ್ನಡಿಯ ಮೇಲೆ ಹಸ್ತಾಕ್ಷರ ಬರೆದು ಹುಸಿ ಬಾಂಬ್‌ ಬೆದರಿಕೆ ನಡುವೆಯೇ ಇಂದು ಬೆಳಗ್ಗೆ ಈ ಬ್ಯಾಗ್‌ ಪತ್ತೆಯಾಗಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!