ಉದಯವಾಹಿನಿ, ಬೆಂಗಳೂರು:  ಲೈಂಗಿಕ ದೌರ್ಜನ್ಯ ಹಗರಣ ಪ್ರಕಣದಲ್ಲಿ ಇಷ್ಟು ದಿನ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕೊನೆಗೂ ಬೆಂಗಳೂರಿನತ್ತ ಹೊರಟಿದ್ದಾರೆ. ಪ್ರಜ್ವಲ್ ಆಗಮಿಸುತ್ತಿರುವ LH764 ವಿಮಾನ ಮ್ಯೂನಿಕ್‌ ಏರ್‌ಪೋರ್ಟ್‌ನಿಂದ ಟೇಕಾಫ್ ಆಗಿದೆ. ಈಗಾಗಲೇ ಲಗೇಜ್ ಚೆಕ್ ಇನ್ ಮಾಡಿಸಿರುವ ಪ್ರಜ್ವಲ್​, ಬ್ಯುಸಿನೆಸ್​​ ಕ್ಲಾಸ್​​ ಪ್ರಯಾಣಿಕರ ಜೊತೆ ಕುಳಿತುಕೊಂಡಿದ್ದಾರೆ. ಪ್ರಜ್ವಲ್‌ ರೇವಣ್ಣ 4 ಬ್ಯಾಗ್ ತಂದಿರುವ ಮಾಹಿತಿ ಇದೆ. ಕೆಂಪೇಗೌಡ ಏರ್‌ಪೋರ್ಟ್‌ಗೆ ಮಧ್ಯರಾತ್ರಿ ಆಗಮಿಸಲಿದ್ದಾರೆ.ದೇಶ ಬಿಟ್ಟುಹೋಗಿ ಬರೋಬ್ಬರಿ 31 ದಿನಗಳ ಬಳಿಕ ವಿಡಿಯೋ ಮಾಡಿ ಮೇ 31 ರಂದು ನಾನು ಎಸ್​ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಆ ಮೂಲಕ ಮ್ಯೂನಿಕ್​ನಿಂದ ಬೆಂಗಳೂರಿಗೆ ಬರಲು ಟಿಕೆಟ್​ ಕೂಡ ಬುಕ್​ ಮಾಡಲಾಗಿತ್ತು. ಪ್ರಜ್ವಲ್​ ಬುಕ್ ಮಾಡಿರುವ ಟಿಕೆಟ್​ನ ಸಂಪೂರ್ಣ ಮಾಹಿತಿ ಟಿವಿ9ಗೆ ಲಭ್ಯವಾಗಿತ್ತು. ಲುಫ್ತಾನ್ಸಾ ಏರ್​​ಲೈನ್ಸ್ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಆಗಿತ್ತು. ಇದೀಗ ಬೆಂಗಳೂರಿನತ್ತ ಹೊರಟಿದ್ದಾರೆ.
ಇತ್ತೀಚೆಗೆ ಬೆಂಗಳೂರಿಗೆ ಬರುವುದಾಗಿ ಪ್ರಜ್ವಲ್​ ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ ಆತ ಎಲ್ಲಿಂದ ವಿಡಿಯೋ ಮಾಡಿದ್ದ ಎನ್ನುವುದು ಗೊತ್ತಾಗಿರಲಿಲ್ಲ. ಬಳಿಕ ಎಸ್​ಐಟಿ ಯೂರೋಪ್​​ನ ಹಂಗೇರಿಯ ಬುಡಾಪೆಸ್ಟ್​​ನಿಂದ ವಿಡಿಯೋ ಮಾಡಿದ್ದಾಗಿ ಪತ್ತೆ ಹಚ್ಚಿತ್ತು. ಮೊಬೈಲ್ ಐಪಿ ಅಡ್ರೆಸ್ ಟ್ರೇಸ್ ಮಾಡಿದಾಗ ಆತ 2 ದಿನ ಮೊದಲೇ ವಿಡಿಯೋ ರೆಕಾರ್ಡ್​ ಮಾಡಿಟ್ಟುಕೊಂಡು ಬಳಿಕ ರಿಲೀಸ್ ಮಾಡಿರುವುದು ಗೊತ್ತಾಗಿತ್ತು. ಇನ್ನು ಪ್ರಜ್ವಲ್​ ರೇವಣ್ಣಗೆ ಬಂಧನ ಭೀತಿ ಕಾಡುತ್ತಿರುವ ಮಧ್ಯೆ ವಿದೇಶದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದಾರೆ. ​

Leave a Reply

Your email address will not be published. Required fields are marked *

error: Content is protected !!