ಉದಯವಾಹಿನಿ, ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪರೂಪದ ತಂತ್ರಜ್ಞ, ಕನಸುಗಾರ ರವಿಚಂದ್ರನ್‌ ಅವರಿಗೆ ಇಂದು 63ನೇ ಹಟ್ಟುಹಬ್ಬದ ಸಂಭ್ರಮ. ಕನಸುಗಾರ, ಪ್ರೇಮಲೋಕದ ಸರದಾರ ಡಾ. ರವಿಚಂದ್ರನ್‌ ಅವರು ಹುಟ್ಟು ಹಬ್ಬದ ಖುಷಿಯಲ್ಲಿದ್ದಾರೆ. ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರ ಜೊತೆಗೆ ಹೊಸಕೆರೆಹಳ್ಳಿಯ ಹೊಸ ಪ್ಲಾಟ್‌‍ನಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
ಅಭಿಮಾನಿಗಳಿಗಾಗಿ ರಾಜಾಜಿನಗರದ ನಿವಾಸಕ್ಕೆ ಆಗಮಿಸಿದ ರವಿಚಂದ್ರನ್‌ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ನೂರಾರು ಮಂದಿ ಅಭಿಮಾನಿಗಳು, ಕಲಾವಿದರು ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಕಳೆದ ವಾರ ರವಿಚಂದ್ರನ್‌ ಅವರ ದಿ ಜಡ್ಜ್ ಮೆಂಟ್‌‍ ಬಿಡುಗಡೆಯಾಗುವ ಮೂಲಕ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದೆ. ರವಿಚಂದ್ರನ್‌ ಅವರ ಬಹುನಿರೀಕ್ಷಿತ ಚಿತ್ರ ಪ್ರೇಮಲೋಕ-2 ಚಿತ್ರ ಕಥೆ ಸಿದ್ಧಪಡಿಸುತ್ತಿದ್ದಾರೆ. ಪ್ರೇಮಲೋಕ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್‌ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್‌್ಸ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಇದರ ಜತೆಗೆ ಮತ್ತೊಂದು ಸಿನಿಮಾವನ್ನು ಕೂಡ ರವಿಚಂದ್ರನ್‌ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರದ ಶೀರ್ಷಿಕೆ ಏನು ಎನ್ನುವುದನ್ನು ಗೌಪ್ಯವಾಗಿ ಇಡಲಾಗಿದೆ. ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!