ಉದಯವಾಹಿನಿ, ಬೆಂಗಳೂರು: ತರಕಾರಿಗಳ ಬೆಲೆ ಇಳಿತಾ ಇಲ್ಲ… ಶಾಲೆಗಳು ಪ್ರಾರಂಭವಾಗಿವೆ. ಮಕ್ಕಳಿಗೆ ದಿನನಿತ್ಯ ಏನ್ ತಿಂಡಿ ಮಾಡಿ ಕಳ್ಸೋದು ಎಂದು ಮಹಿಳೆಯರಲ್ಲಿ ಚಿಂತೆ ಶುರುವಾಗಿದೆ. ಕಳೆದ ಎರಡು ತಿಂಗಳಿನಿಂದ ಶಾಲಾ-ಕಾಲೇಜುಗಳಿಗೆ ರಜೆ ಇದ್ದು, ಮಕ್ಕಳು ಮನೆಯಲ್ಲೆ ಇದ್ದರು, ಕೆಲ ಮಕ್ಕಳ ಊರು ಸೇರಿದ್ದರು. ಈ ವೇಳೆ ತಿಂಡಿಯ ಚಿಂತೆ ಇರಲಿಲ್ಲ. ಮನೆಯಲ್ಲೆ ಇರೋ ತರಕಾರಿ ಹಾಕಿ ಅಡುಗೆ ಮಾಡಿ ದಿನ ಕಳೆಯುತ್ತಿದ್ದೆವು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ದಿನನಿತ್ಯ ತಿಂಡಿ ಮಾಡಲೇಬೇಕು. ತರಕಾರಿ ಇಲ್ಲದೆ ಯಾವ ತಿಂಡಿ ಮಾಡೋದು, ಬ್ಯಾಗು ಇಡಿದು ತರಕಾರಿ ಅಂಗಡಿಗಳಿಗೆ ಹೋದರೆ ಬೆಲೆ ನೋಡಿ ತಲೆ ತಿರುಗುತ್ತೆ ಎಂದು ಸಾಮಾನ್ಯವರ್ಗದ ಮಹಿಳೆಯರ ಸಾಮಾನ್ಯ ಮಾತುಗಳಿವು. ಕಳೆದ ಸುಮಾರು ಒಂದು ತಿಂಗಳಿನಿಂದಲೂ ತರಕಾರಿಗಳ ಬೇಲೆ ಷೇರು ಮಾರುಕಟ್ಟೆಯಂತೆ ಏರುತ್ತಲೆ ಇದೆ. ಸದ್ಯಕ್ಕೆ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಅಪರೂಪಕ್ಕೆ ಬಳಸುತ್ತಿದ್ದ ತರಕಾರಿಗಳ ಬೆಲೆಯೂ ಸಹ ಏರಿಕೆಯಾಗಿದ್ದು, ಮಾಹಿಳೆಯರ ಸಾಸಿವೆ ಡಬ್ಬಿ ಹಣ ಖಾಲಿಯಾಗುವಂತೆ ಮಾಡುತ್ತಿದೆ.
ಮಕ್ಕಳಿಗೆ ಶುಚಿ-ರುಚಿಯಾದ ತಾಜಾ ತಿಂಡಿ-ಊಟ ಕೊಡಬೇಕು ಎಂದು ಕೆಲ ಖಾಸಗಿ ಶಾಲೆಗಳ ನಿಯಮ ಇದೆ. ಅದರಲ್ಲಿ ಚಿಕ್ಕಮಕ್ಕಳಿಗೆ ಮೆನೂ ಕೂಡ ಇದೆ. ಒಂದು ಕಡೆ ಶಾಲೆ ಫೀಸ್ ಕಟ್ಟಿ ಕೈ ಖಾಲಿ… ದಿನನಿತ್ಯ ತರಕಾರಿ ತರಬೇಕು ಅಂದ್ರೆ ಕನಿಷ್ಟ 150 ರೂ.ಬೇಕು ಎಂಬುದು ಪೊಷಕರ ನೋವಿನ ಮಾತಾಗಿದೆ.
ಬೀನ್‌್ಸ ಬರೋಬ್ಬರಿ ದ್ವಿಶತಕ ಬಾರಿಸಿ ಮುನ್ನುಗ್ಗುತ್ತಿದೆ. ಕ್ಯಾರೆಟ್ ಕೆಜಿಗೆ 100, ನವಿಲುಕೋಸು, 60, ಆಲೂಗೆಡ್ಡೆ 50, ಹಸಿ ಬಟಾಣಿ 200. ಕ್ಯಾಪ್ಸಿಕಂ 80, ಬದನೆಕಾಯಿ 60, ಮೂಲಂಗಿ 60, ಹಾಗಲಕಾಯಿ 60, ಈರೇಕಾಯಿ, 80. ಗೋರಿಕಾಯಿ 60, ಪಡವಲಕಾಯಿ 50, ಹಸಿಮೆಣಸಿನಕಾಯಿ 120ರೂ.ಗೆ ಮರಾಟವಾಗುತ್ತಿದೆ.
