
ಉದಯವಾಹಿನಿ, ಮುದಗಲ್: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ಡಾ.ಕೆ.ವಸಂತಕುಮಾರ ಭಾನುವಾರ ಭೇಟಿ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರದ ಹೊರ ಹಾಗೂ ಒಳ ರೋಗಿಗಳ ಕೊಠಡಿ, ಔಷಧಾಲಯ, ಸ್ಕ್ಯಾನಿಂಗ್ ಸೆಂಟರ್, ಎಕ್ಸ್ ರೇ ಸೆಂಟರ್ ಸೇರಿ ವಿವಿಧ ಕೊಠಡಿಗಳನ್ನು ಪರಿಶೀಲಿಸಿದರು.
ವೈದ್ಯಾಧಿಕಾರಿ ಡಾ.ಅನಂತಕುಮಾರ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.
